ಚೈತ್ರಾ ಗ್ಯಾಂಗ್ ಶುದ್ಧ ವಂಚಕರು – ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲ- ಕಮೀಷನರ್ ಹೇಳಿಕೆ

ಮಂಗಳೂರು(ಬೆಂಗಳೂರು): ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಏಳು ಕೋಟಿ ರೂ. ಹಣ ಪಡೆದು ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ವಂಚಿಸಿದ್ದು, ಚೈತ್ರಾ ಗ್ಯಾಂಗ್ ನಿಂದ ಇದೊಂದು ನೇರಾನೇರಾ ವಂಚನೆ ಪ್ರಕರಣವಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಬೆಂಗಳೂರು ನಗರ ಕಮೀಷನರ್ ಬಿ‌. ದಯಾನಂದ್ ಹೇಳಿದ್ದಾರೆ.

ಇತ್ತೀಚೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಮತ್ತು ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಚೈತ್ರಾ, ಪ್ರಕರಣದಲ್ಲಿ ದೊಡ್ಡದೊಡ್ಡವರ ಹೆಸರೆಲ್ಲಾ ಹೊರಬರಲಿದೆ ಎಂದು ಬಾಂಬ್‌ ಸಿಡಿಸಿದ್ದಳು. ಆದರೆ ಇದೆಲ್ಲಾ ಸುಳ್ಳು, ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಬೆಂಗಳೂರು ನಗರ ಕಮೀಷನರ್ ಬಿ‌. ದಯಾನಂದ್ ಸ್ಪಷ್ಟನೆ ನೀಡಿದ್ದಾರೆ.

ಪ್ರಕರಣದಲ್ಲಿ ಒಟ್ಟು ಏಳು ಜನರನ್ನು ಬಂಧಿಸಲಾಗಿದೆ. ಸಿಸಿಬಿ ಅಧಿಕಾರಿಗಳ ತಂಡ ವಂಚಕರನ್ನು ಬಂಧನಕ್ಕೊಳಪಡಿಸಿದ್ದು, ಪ್ರಕರಣದಲ್ಲಿ ಶಾಮೀಲಾದ ಎಲ್ಲರನ್ನೂ ಸೆರೆಹಿಡಿಯಲಾಗುವುದು. ಹಣ ಮರುವಸೂಲಿ ಬಗ್ಗೆ ನಂತರ ತನಿಖೆ ನಡೆಯಲಿದ್ದು, ಸದ್ಯಕ್ಕೆ ಸಿಸಿಬಿ ವಿಚಾರಣೆ ನಡೆಸುತ್ತಿದೆ‌‌. ಪ್ರಕರಣದಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲ. ಸಂಪೂರ್ಣ ತನಿಖೆಯ ಬಳಿಕ ಪ್ರಕರಣದ ಬಗ್ಗೆ ವಿವರಣೆ ನೀಡಲಾಗುವುದು ಎಂದು ಕಮೀಷನರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here