ದೇಶದ ಹೆಸರನ್ನು ಬದಲಿಸಲು ಈ ದೇಶ ನಿಮ್ಮ ಅಪ್ಪನದ್ದಾ?-ಛತ್ತೀಸ್‌ಘಡ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ಕೇಜ್ರಿವಾಲ್ ಆಕ್ರೋಶ

ಮಂಗಳೂರು(ಛತ್ತೀಸ್‌ಘಡ): ದೇಶದ ಹೆಸರನ್ನು ಬದಲಿಸಲು ಈ ದೇಶ ನಿಮ್ಮ ಅಪ್ಪನದ್ದಾ? ಇದು 140 ಕೋಟಿ ಜನರಿಗೆ ಸೇರಿದ್ದು. ಬಿಜೆಪಿಗೆ ಧೈರ್ಯವಿದ್ದರೆ ಇಂಡಿಯಾ ಹೆಸರನ್ನು ಬದಲಿಸಲಿ” ಎಂದು ಬಿಜೆಪಿ ವಿರುದ್ಧ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ. ‘ಇಂಡಿಯಾ’ ಹೆಸರನ್ನು ಅಧಿಕೃತವಾಗಿ ‘ಭಾರತ’ ಎಂದು ಬದಲಿಸಲಾಗುತ್ತದೆ ಎಂಬ ಸುದ್ದಿಯ ನಡುವೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕೇಜ್ರಿವಾಲ್, ತಾಕತ್ತಿದ್ದರೆ ಇಂಡಿಯಾ ಹೆಸರನ್ನು ಬದಲಿಸಿ ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ.

ಛತ್ತೀಸ್‌ಘಡದಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡಿದ ಕೇಜ್ರಿವಾಲ್, ಇಂಡಿಯಾ ನಿಮ್ಮ ಅಪ್ಪನಿಗೆ ಸೇರಿದ್ದಾ? ಇದು 140 ಕೋಟಿ ಜನರಿಗೆ ಸೇರಿದ್ದು. ಇಂಡಿಯಾ ನಮ್ಮ ಹೃದಯಗಳಲ್ಲಿ ನೆಲೆಸಿದೆ, ಭಾರತ ಕೂಡ ನಮ್ಮ ಹೃದಯಗಳಲ್ಲಿ ನೆಲೆಸಿದೆ, ಹಿಂದೂಸ್ತಾನವೂ ನಮ್ಮ ಹೃದಯಗಳಲ್ಲಿ ನೆಲೆಸಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಕಳೆದ ವರ್ಷದವರೆಗೂ ಇಂಡಿಯಾ ಹೆಸರಿನಡಿಯಲ್ಲಿ ಮೋದಿ ಸರ್ಕಾರವು ಅನೇಕ ಯೋಜನೆಗಳನ್ನು ನಡೆಸುತ್ತಿತ್ತು. ಆದರೆ ಈಗ ವಿಪಕ್ಷಗಳ ಇಂಡಿಯಾ ಬಣ ರಚನೆಯಾದ ಬಳಿಕ ಇದ್ದಕ್ಕಿದ್ದಂತೆ ದೇಶದ ಹೆಸರನ್ನು ಬದಲಿಸುವ ಬಗ್ಗೆ ಮಾತನಾಡುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಕೇಜ್ರಿವಾಲ್ ಕಿಡಿಕಾರಿದ್ದಾರೆ. ಬಿಜೆಪಿಗೆ ಧೈರ್ಯವಿದ್ದರೆ ಇಂಡಿಯಾ ಹೆಸರನ್ನು ಬದಲಿಸಿ ಎಂದು ನಾನು ಅವರಿಗೆ ಸವಾಲು ಹಾಕಲು ಬಯಸುತ್ತೇನೆ ಎಂದು ದಿಲ್ಲಿ ಸಿಎಂ ಗುಡುಗಿದರು.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here