ಮಂಗಳೂರು(ಮಡಿಕೇರಿ): ಕೊಡಗಿನ ಗಡಿಭಾಗ ಪೆರುಂಬಾಡಿ ಚೆಕ್ ಪೋಸ್ಟ್ ವ್ಯಾಪ್ತಿಯ ಕಾಡು ಪ್ರದೇಶದಲ್ಲಿ ಸೂಟ್ ಕೇಸ್ವೊಂದರಲ್ಲಿ ಮಹಿಳೆಯ ಕೊಳೆತ ಮೃತದೇಹ ಪತ್ತೆಯಾಗಿರುವುದು ವರದಿಯಾಗಿದೆ.
ಚೆಕ್ ಪೋಸ್ಟ್ ನಿಂದ 3 ಕಿ.ಮೀ ದೂರದಲ್ಲಿ ವಾಟೆಕೊಲ್ಲಿ ಎಂಬಲ್ಲಿ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.