ಬಿಜೆಪಿ ಟಿಕೆಟ್ ವಂಚನೆ ಪ್ರಕರಣ – ಹಾಲಶ್ರೀ ಮಠಕ್ಕೆ 54 ಲಕ್ಷ ರೂ, ತಂದಿಟ್ಟ ಮೈಸೂರಿನ ವಕೀಲ

ಮಂಗಳೂರು(ಬೆಂಗಳೂರು): ಅಭಿನವ ಹಾಲಶ್ರೀ ಸ್ವಾಮೀಜಿ ಅರೆಸ್ಟ್ ಬೆನ್ನಲ್ಲೇ, ಮೈಸೂರಿನ ವಕೀಲರೊಬ್ಬರು ಹಿರೇಹಡಗಲಿಯ ಮಠಕ್ಕೆ 56 ಲಕ್ಷ ರೂ. ಹಣ ತಂದಿಟ್ಟಿದ್ದಾರೆ. ಹಣದ ಕುರಿತು ಪ್ರಣವ್ ಪ್ರಸಾದ್ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ.

ಡಿಸಿಪಿಯವರಿಗೆ ಪ್ರಣವ್ ಪ್ರಸಾದ್ ಬರೆದ ಪತ್ರದಲ್ಲಿ ಮಠಕ್ಕೆ ಹಣ ಬಂದ ಬಗ್ಗೆ ಉಲ್ಲೇಖವಾಗಿದ್ದು, ಪ್ರಣವ್ ಪುಸಾದ್ 53 ವರ್ಷ, ಆದ ನಾನು ಮೈಸೂರಿನನಲ್ಲಿ ನೆಲೆಸಿದ್ದು ವಕೀಲ ವೃತ್ತಿ ಮಾಡಿಕೊಂಡಿರುತ್ತೇನೆ. ಹಾಲಶ್ರೀ ಸ್ವಾಮಿಜಿಗಳು ಕಳೆದ ಎಂಟು ತಿಂಗಳಿನಿಂದ ನಮ್ಮ ಒಡನಾಟದಲ್ಲಿ ಇದ್ದರು. ಸ್ವಾಮೀಜಿಯ ಜೊತೆಗೆ ನಮ್ಮ ಮನೆಗೆ ಬರುತ್ತಿದ್ದ ಚಾಲಕ ರಾಜು ಎಂಬಾತ ನಾಲ್ಕು ದಿನಗಳ ಹಿಂದೆ ನಮ್ಮ ಕಚೇರಿಗೆ ಬಂದಿದ್ದ. ಅಂದು ಅವನು ಒಂದು ಬ್ಯಾಗನ್ನು ಬಿಟ್ಟು ಹೋಗಿದ್ದ. ಯಾವುದೋ ಲಗೇಜ್ ಇರಬೇಕೆಂದು ನಾವು ಸುಮ್ಮನಾಗಿದ್ದೆವು. ಆ ಬ್ಯಾಗನ್ನು ಮೈಸೂರಿನ ಯಾರಿಗೋ ಕೊಡಲು ಹೇಳಿದ್ದರು.ಆದರೆ ಆ ವಕೀಲರು ನನಗೆ ಸಿಗದ ಕಾರಣ ಆ ಬ್ಯಾಗನ್ನು ನಿಮ್ಮ ಕಚೇರಿಯಲ್ಲಿ ಇಟ್ಟಿದ್ದೇನೆ ಎಂದರು. ಆ ಬ್ಯಾಗನ್ನು ತೆಗೆದುಕೊಂಡು ಹೋಗಲು ಅವರಿಗೆ ಹಲವು ಬಾರಿ ಹೇಳಿ, ಮೂರ್ನಾಲ್ಕು ದಿನವಾದರೂ ಅವರು ಯಾರು ಈ ಕಡೆ ತಲೆಹಾಕಲಿಲ್ಲ. ಸ್ವಾಮೀಜಿ ಹೇಳಿದಂತೆ ಮಠದಲ್ಲಿ ಹಾಲಸ್ವಾಮಿ ಎಂಬವರಿಗೆ ಈ ಹಣವನ್ನು ಇಂದು ಬೆಳಗ್ಗೆ ತಲುಪಿಸಿ ಬಂದಿರುತ್ತೇನೆ. ಈ ಸ್ವಾಮೀಜಿಯವರ ವ್ಯವಹಾರಗಳಿಗೂ ನಮ್ಮ ಕುಟುಂಬಕ್ಕೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ತಿಳಿಸಿರುವ ಅವರು ರಕ್ಷಣೆ ನೀಡಬೇಕೆಂದು ಡಿಸಿಪಿಯವರಲ್ಲಿ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here