ನಾಗಪುರದಲ್ಲಿ ಭಾರಿ ಮಳೆ – ಹಲವು ಪ್ರದೇಶಗಳು ಜಲಾವೃತ – 40 ವಿದ್ಯಾರ್ಥಿಗಳು ಸೇರಿ 180 ಜನರ ರಕ್ಷಣೆ

ಮಂಗಳೂರು (ನಾಗಪುರ): ನಗರದ ಹಲವೆಡೆ ಧಾರಾಕಾರ ಮಳೆಯಿಂದಾಗಿ ಇಂದು ಕೆಲ ಪ್ರದೇಶಗಳು ಜಲಾವೃತಗೊಂಡಿದೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ತಿಳಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಯು ಉಕ್ಕಿ ಹರಿಯುತ್ತಿರುವ ಅಂಬಝಾರಿ ನದಿ ಪ್ರದೇಶಕ್ಕೆ ತೆರಲಿ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿವೆ. ವಾಕ್‌ ಮತ್ತು ಶ್ರವಣ ದೋಷವುಳ್ಳ 40 ವಿದ್ಯಾರ್ಥಿಗಳು ಸೇರಿದಂತೆ 180 ಜರನ್ನು ರಕ್ಷಿಸಲಾಗಿದೆ ಎಂದು ಫಡಣವೀಸ್‌ ತಿಳಿಸಿದ್ದಾರೆ. ನಗರದಲ್ಲಿ ಸೆ.22ರ ರಾತ್ರಿ ಭಾರಿ ಮಳೆ ಸುರಿದಿದ್ದು, ಹಲವು ರಸ್ತೆಗಳು, ವಸತಿ ಪ್ರದೇಶಗಳು ಮುಳುಗಡೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುನ್ನೆಚ್ಚರಿಕೆಯ ದೃಷ್ಟಿಯಿಂದ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

LEAVE A REPLY

Please enter your comment!
Please enter your name here