ಮಂಗಳೂರು(ಬೆಂಗಳೂರು): ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್‌ನ 105ನೇ ಸಂಚಿಕೆಯಲ್ಲಿ ಜರ್ಮನಿಯ ಕ್ಯಾಸ್ಮೆ ಅವರು ಭಾರತೀಯ ಸಂಗೀತದ ಬಗ್ಗೆ ವಿಶೇಷ ಒಲವು ಹೊಂದಿರುವುದನ್ನು ಉಲ್ಲೇಖಿಸಿ ಮಾತನಾಡಿದ್ದಾರೆ̤
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ, ದೃಷ್ಟಿ ಕಳೆದುಕೊಂಡಿರುವ ಜರ್ಮನಿಯ 21 ವರ್ಷದ ಕ್ಯಾಸ್ಮೆ ಅವರಿಗೆ ವಿಕಲತೆ ಎಂದೂ ಅಡ್ಡಿಯಾಗಿಲ್ಲ. ಭಾರತೀಯ ಭಾಷೆಗಳಲ್ಲಿ ಕ್ಯಾಸ್ಮೆ ಅವರು ಹಾಡುವುದನ್ನು ಕೇಳಿದರೆ ನೀವು ಮಂತ್ರಮುಗ್ಧರಾಗುತ್ತೀರಿ. ಸಂಗೀತದ ಬಗ್ಗೆ ಅಪಾರ ಒಲವನ್ನು ಹೊಂದಿರುವ ಕ್ಯಾಸ್ಮೆ ಕನ್ನಡ ಭಾಷೆಯಲ್ಲೂ ಹಾಡಿದ್ದಾರೆ. ಕ್ಯಾಸ್ಮೆ ಹಾಡಿರುವ ಕ್ಲಿಪ್‌ವೊಂದನ್ನು ಇಂದಿನ (ಸೆಪ್ಟೆಂಬರ್ 24) ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಪ್ಲೇ ಮಾಡಿದ್ದಾರೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
ಭಾರತೀಯ ಭಾಷೆಗಳಲ್ಲಿ ಕ್ಯಾಸ್ಮೆ ಅವರು ಹಾಡುವುದನ್ನು ಕೇಳಿ ನೀವು ಮಂತ್ರಮುಗ್ಧರಾಗುತ್ತೀರಿ. ಜರ್ಮನಿಗೆ ಸೇರಿದವರು ಮತ್ತು ದೃಷ್ಟಿ ವಿಶೇಷಚೇತನರಾಗಿದ್ದಾರೆ. ಆದರೆ ಅದು ಅವರ ಸಂಗೀತದ ಉತ್ಸಾಹಕ್ಕೆ ತಡೆಯಾಗಲಿಲ್ಲ. ಅವರು ಶ್ರೇಷ್ಠ ಭಾಷೆ ಕನ್ನಡದಲ್ಲಿ ಕೂಡ ಹಾಡಿದ್ದಾರೆ, ನಾನು ಅದರ ಕ್ಲಿಪ್ ಅನ್ನು #MannKiBaat ಸಮಯದಲ್ಲಿ ಪ್ಲೇ ಮಾಡಿದ್ದೆ. pic.twitter.com/cWJIGbvwl4
— Narendra Modi (@narendramodi) September 24, 2023