ಮಂಗಳೂರು : ಸ್ಪಾನಿಶ್ ಬಾವಲಿ ಗುಹೆಯಲ್ಲಿ ಯುರೋಪಿನ 6000 ವರ್ಷಗಳಷ್ಟು ಹಳೆಯದಾದ ಬೂಟುಗಳು ಪತ್ತೆಯಾಗಿದೆ.
ನೇಯ್ದ ಬುಟ್ಟಿಗಳಂತಿರುವ ಈ ಬೂಟುಗಳಲ್ಲಿ ಮರದ ಕಲಾಕೃತಿಗಳು ಕಂಡುಬಂದಿವೆ. ಎಸ್ಪಾರ್ಟೂ ಗ್ರಾಸ್ ಎಂಬ ಫೈಬರ್ ನಿಂದ ನೇಯ್ದ ಶೂ ಇದಾಗಿದ್ದು ಆಧುನಿಕ ಕಾಲದ ಎಸ್ಪಡ್ರಿಲ್ ಶೂ ವಿನ ಹೋಲಿಕೆ ಕಂಡು ಬಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
2008 ರಲ್ಲಿ ಅರ್ಮೆನಿಯಾದಲ್ಲಿ ಪತ್ತೆಯಾದ 5500 ವರ್ಷಗಳಷ್ಟು ಹಳೆಯದಾದ ಚರ್ಮದ ಶೂ ಗಿಂತ ಈ ಶೂ ಹಳೆಯದಾಗಿದೆ ಎಂದು ಸಂಶೋಧನಾ ತಂಡ ಹೇಳಿದೆ.
ಗುಹೆಯಲ್ಲಿ ಶೂ ಮಾತ್ರವಲ್ಲದೆ ನೇಯ್ದ ಬುಟ್ಟಿಗಳು, ಸುತ್ತಿಗೆಗಳು, ಮೊಣಚಾದ ಕೋಲುಗಳ ತರಹದ ಮರದ ಉಪಕರಣಗಳು ಸೇರಿದಂತೆ 76 ವಸ್ತುಗಳು ದೊರಕಿದ್ದು, ಈ ಪೈಕಿ ಕೆಲವು ವಸ್ತುಗಳು 9500 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗಿದೆ.