ಮಂಗಳೂರು(ಮುಂಬೈ): ಬ್ಯಾಂಕುಗಳಲ್ಲಿ 2,000 ರೂ. ನೋಟು ವಿನಿಮಯಕ್ಕೆ ಅ.7ರ ವರೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಲಾವಕಾಶ ವಿಸ್ತರಣೆ ಮಾಡಿದೆ. ಈ ಹಿಂದಿನ ಆದೇಶದಲ್ಲಿ ಸೆ.30 ರವರೆಗೆ ಅವಕಾಶ ನೀಡಲಾಗಿತ್ತು.
2016ರ ನಗದು ಅಮಾನ್ಯೀಕರಣ ಪ್ರಕ್ರಿಯೆಯ ಬಳಿಕ ಭಾರತದಲ್ಲಿ 2000 ರೂ. ಗಳ ನೋಟು ಚಾಲನೆಗೆ ಬಂದಿತ್ತು. 2000 ನೋಟುಗಳ ವಿನಿಮಯಕ್ಕೆ ಇನ್ನು 4 ದಿನಗಳು ಬಾಕಿ ಉಳಿದಿದ್ದು, ಕಾಲಾವಕಾಶವನ್ನು ಬಳಸಿಕೊಳ್ಳುವಂತೆ ಕೇಳಿಕೊಳ್ಳಲಾಗಿದೆ.