ಸಿಕ್ಕಿಂ ಮೇಘಸ್ಫೋಟ – ಮೃತರ ಸಂಖ್ಯೆ 14ಕ್ಕೆ ಏರಿಕ-102 ಮಂದಿ ನಾಪತ್ತೆ – ರಕ್ಷಣಾ ಸಿಬ್ಬಂದಿಗಳಿಂದ ಶೋಧ ಕಾರ್ಯ 

ಮಂಗಳೂರು(ಗ್ಯಾಂಗ್ಟಕ್‌): ಮೇಘಸ್ಫೋಟದಿಂದಾಗಿ ತೀಸ್ತಾ ನದಿಯಲ್ಲಿ ಉಂಟಾದ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. 22 ಸೇನಾ ಸಿಬ್ಬಂದಿ ಸೇರಿದಂತೆ 102 ಮಂದಿ ನಾಪತ್ತೆಯಾಗಿದ್ದಾರೆ. ಕಣ್ಮರೆಯಾದವರಿಗಾಗಿ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ರಾಜ್ಯದಲ್ಲಿ ಸುಮಾರು 22 ಸಾವಿರ ಜನರು ತೊಂದರೆಗೀಡಾಗಿದ್ದಾರೆ. ಈವರೆಗೆ 2,011 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯ ಸರ್ಕಾರವು 26 ಸ್ಥಳಗಳಲ್ಲಿ ಪರಿಹಾರ ಶಿಬಿರಗಳನ್ನು ತೆರೆದಿದೆ. ಗ್ಯಾಂಗ್ಟಕ್‌ನಲ್ಲೇ 8 ಶಿಬಿರಗಳನ್ನು ತೆರೆಯಲಾಗಿದೆ. 1,025 ಜನರು ಈ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೇಘಸ್ಫೋಟದಿಂದಾಗಿ ನಾಲ್ಕು ಜಿಲ್ಲೆಗಳಲ್ಲಿ 11 ಸೇತುವೆಗಳು, 277 ಒಳಚರಂಡಿ ಲೈನ್‌ಗಳು ಮತ್ತು ನೀರಿನ ಪೈಪ್‌ಲೈನ್‌ಗಳು ಹಾನಿಗೀಡಾಗಿದೆ.

LEAVE A REPLY

Please enter your comment!
Please enter your name here