ಗಾಂಧಿ-ಸಂಕ್ಷಿಪ್ತ ಜೀವನ ಕಥನ – 10

ನನ್ನ ದೇಶ-ನನ್ನ ಜನ

21 ವರ್ಷಗಳು ದಕ್ಷಿಣ ಆಫ್ರಿಕಾದ ವಾಸ್ತವ್ಯವನ್ನು ಮತ್ತು ಹೋರಾಟಗಳನ್ನು ಮುಗಿಸಿ ಗಾಂಧಿ 1915ರಲ್ಲಿ ಭಾರತಕ್ಕೆ ಬಂದರು. ಗೋಪಾಲಕೃಷ್ಣ ಗೋಖಲೆಯವರು ಗಾಂಧಿಯವರಿಗೆ ಆಗಾಗ್ಗೆ ಭಾರತೀಯರ ಸ್ಥಿತಿಗತಿಗಳನ್ನು ವಿವರಿಸುತ್ತಿದ್ದರು. ಇಲ್ಲಿನ ರಾಜಕಾರಣದ ಬಗ್ಗೆ ಮತ್ತು ದೇಶವು ಎದುರಿಸುತ್ತಿದ್ದ ಸಮಸ್ಯೆಗಳ ಬಗ್ಗೆ ಅವರಿಗೆ ಮಾಹಿತಿ ನೀಡಿ ಮಾರ್ಗದರ್ಶನ ಮಾಡುತ್ತಿದ್ದರು. ಗಾಂಧಿ ಅವರನ್ನು ತಮ್ಮ ರಾಜಕೀಯ ಗುರು ಎಂದೇ ಕರೆಯುತ್ತಿದ್ದರು. ಭಾರತದಲ್ಲಿ ಬ್ರಿಟಿಷರ ವಿರುದ್ದ ನೂರು ವರ್ಷಗಳಿಗೂ ಹಿಂದಿನಿಂದ ನಡೆಯುತ್ತ ಬಂದಿದ್ದ ಹೋರಾಟಗಳ ಪರಿಚಯ ಅವರಿಗಿತ್ತು. ಭಾರತ ರಾಷ್ಟ್ರೀಯ ಕಾಂಗ್ರೆಸ್‌ ನ ಹಲವು ನಾಯಕರುಗಳ ಸಂಪರ್ಕವೂ ಇತ್ತು. ಹಾಗೆಯೇ ಕಾಂಗ್ರೆಸ್‌ ಕೆಲವು ಸಮಾವೇಶಗಳಲ್ಲೂ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.

LEAVE A REPLY

Please enter your comment!
Please enter your name here