ಮಂಗಳೂರು(ಮೊಸುಲ್): ವಿವಾಹ ಸಮಾರಂಭದಲ್ಲಿ ತಮ್ಮ ಕುಟಂಬಸ್ಥರು ಸೇರಿದಂತೆ 100 ಕ್ಕೂ ಅಧಿಕ ಮಂದಿ ಮೃತಪಟ್ಟ ಘಟನೆ ಇರಾಕ್‌ನ ಮೊಸುಲ್ ಸಮೀಪದ ಕರಾಕೋಶ್‌ನಲ್ಲಿ ನಡೆದಿದೆ. ಕಿಕ್ಕಿರಿದು ತುಂಬಿದ್ದ ಮದುವೆ ಸಭಾಂಗಣದಲ್ಲಿ ಉಂಟಾದ ಅಗ್ನಿ ಅವಘಡದಲ್ಲಿ 107 ಮಂದಿ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ವಧು-ವರರು ಪಾರಾಗಿದ್ದರೂ, ದುರಂತದ ಆಘಾತದಿಂದ ಜೀವಚ್ಛವದಂತೆ ಆಗಿದ್ದಾರೆ.
ಆಘಾತದಿಂದ ವಧು ಮಾತು ಬಿಟ್ಟಿದ್ದರೆ, ಆಕೆಯ ಪತಿ ಭಾವನಾತ್ಮಕವಾಗಿ ಸಂಪೂರ್ಣ ಕುಸಿದುಹೋಗಿದ್ದಾರೆ. ‘ಸ್ಕೈ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮದುಮಗ ರೇವನ್, ನಾವು ಆಂತರಿಕವಾಗಿ ಸತ್ತಿದ್ದೇವೆ, 18 ವರ್ಷದ ಮಧುಮಗಳು ಹನೀನ್ ತನ್ನ ಕುಟುಂಬದ ಹತ್ತು ಸದಸ್ಯರನ್ನು ಕಳೆದುಕೊಂಡ ಆಘಾತದಲ್ಲಿ ಮಾತನಾಡಲು ಆಗದ ಸ್ಥಿತಿಯಲ್ಲಿದ್ದಾಳೆ ಎಂದು ತಿಳಿಸಿದ್ದಾರೆ. ಮಂಗಳವಾರ ನಡೆದ ದುರ್ಘಟನೆಯಲ್ಲಿ ವಧು ತನ್ನ ತಾಯಿ ಮತ್ತು ಸಹೋದರನನ್ನು ಕಳೆದುಕೊಂಡರೆ, ರೇವನ್ ತನ್ನ 15 ಸಂಬಂಧಿಕರನ್ನು ಕಳೆದುಕೊಂಡಿದ್ದಾರೆ. ಸಮಾರಂಭದಲ್ಲಿ ಪಟಾಕಿ ಸಿಡಿಸುವಾಗ ಕಲ್ಯಾಣ ಮಂಟಪದಲ್ಲಿ ಅಲಂಕಾರಿಕ ನೈಲಾನ್ ಛಾವಣಿಗೆ ಬೆಂಕಿ ಹತ್ತಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಇಡೀ ಮಂಟಪಕ್ಕೆ ಬೆಂಕಿ ಆವರಿಸಿತ್ತು.
ಹಮ್ದನಿಯಾ ಎಂದೂ ಕರೆಯಲ್ಪಡುವ ಈ ಪಟ್ಟಣದಲ್ಲಿ ಸುಮಾರು 26,000 ಕ್ರಿಶ್ಚಿಯನ್ನರು ನೆಲೆಸಿದ್ದಾರೆ. ಈ ದುರಂತದಿಂದಾಗಿ ಇಡೀ ಪಟ್ಟಣವೇ ಸ್ಥಬ್ಧವಾಗಿದೆ, ದೇಶದಲ್ಲಿ ದುಖ ಮಡುಗಟ್ಟಿದೆ. ಸಭಾಂಗಣದಲ್ಲಿ 400 ಜನರಿಗೆ ಮಾತ್ರ ಅವಕಾಶವಿದ್ದು, ಇದರ ಮಾಲಕರು 900 ಜನರಿಗೆ ಅವಕಾಶ ನೀಡಿದ್ದರು ಎನ್ನಲಾಗಿದೆ. ಪಟಾಕಿಯಿಂದ ಹೊತ್ತಿಕೊಂಡ ಬೆಂಕಿಯನ್ನು ಶಾರ್ಟ್ ಸರ್ಕ್ಯೂಟ್ ಎಂದು ಭಾವಿಸಿದ ಸಭಾಂಗಣದ ಸಿಬ್ಬಂದಿಗಳು ತಕ್ಷಣವೇ ವಿದ್ಯುತ್ ಕಡಿತಗೊಳಿಸಿದ್ದು, ಇದರಿಂದ ಉಂಟಾದ ಗಲಿಬಿಲಿಯಿಂದ ನೆರೆದಿದ್ದ ಅತಿಥಿಗಳು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಇದರಿಂದಾಗಿ ಕಾಲ್ತುಳಿತ ಉಂಟಾಗಿದ್ದು, ಸಾವಿನ ಪ್ರಮಾಣ ಹೆಚ್ಚಲು ಕಾರಣವಾಗಿದೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Iraq: Bride and groom survived but they lost everyone they loved. The bride lost all her family, groom lost his mother! The fire resulted in 98 deaths.
Please avoid indoor fireworks and extra risky activities during events, may Allah protect us all. Ameen pic.twitter.com/A781YNELRc
— Ali Qasim (@aliqasim) September 29, 2023