ಗಾಂಧಿ-ಸಂಕ್ಷಿಪ್ತ ಜೀವನ ಕಥನ – 12

ಮೊದಲನೆ ಮಹಾಯುದ್ಧದಲ್ಲಿ ಗಾಂಧಿಯವರ ಪಾತ್ರ

ಮೊದಲನೆ ಮಹಾಯುದ್ದವು 1914ರಲ್ಲಿ ಪ್ರಾರಂಭವಾಗಿತ್ತು. ಬ್ರಿಟಿಷ್‌ ಸರ್ಕಾರವು ಯುದ್ದದಲ್ಲಿ ಪ್ರಮುಖ ಭಾಗಿಯಾಗಿತ್ತು. ಭಾರತೀಯ ಸಿಪಾಯಿಗಳನ್ನು ಸೇನೆಗೆ ಭರ್ತಿ ಮಾಡಿಕೊಂಡು ತನ್ನ ಮಿಲಿಟರಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅದು ಬಯಸಿತು. 1918ರ ಏಪ್ರಿಲ್‌ ತಿಂಗಳಲ್ಲಿ ವೈಸ್‌ರಾಯ್‌ ಅವರು ದೆಹಲಿಯಲ್ಲಿ ಯುದ್ದ ಸಮಾವೇಶವನ್ನು ಕರೆದರು. ಭಾರತದಲ್ಲಿ ಯುದ್ದದಲ್ಲಿ ಭಾಗವಹಿಸುವಂತೆ ಮಾಡುವುದು ಅದರ ಉದ್ದೇಶವಾಗಿತ್ತು. ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಹಲವು ನಾಯಕರುಗಳನ್ನು ಸಮಾವೇಶಕ್ಕೆ ಆಹ್ವಾನಿಸಲಾಗಿತ್ತು.

ಗಾಂಧಿ ದಕ್ಷಿಣ ಆಫ್ರಿಕದಲ್ಲಿ ತುರ್ತು ಶುಶ್ರೂಷ ದಳವನ್ನು ರಚಿಸಿಕೊಂಡು ಬ್ರಿಟಿಷ್‌ ಸೇನೆಗೆ ನೆರವಾಗಿದ್ದರು. ಭಾರತಕ್ಕೆ ಬಂದ ಮೇಲೆ ಅವರು ಹಲವು ಜನಪರ ಹೋರಾಟಗಳಲ್ಲಿ  ಭಾಗವಹಿಸಿ ಜನಮಾನ್ಯತೆಯನ್ನು ಗಳಿಸಿದ್ದರು. ಅವರ ಸಂಘಟನಾ ಸಾಮರ್ಥ್ಯವನ್ನು ಕಾಂಗ್ರೆಸ್‌ ಕೂಡ ಗುರುತಿಸಿತ್ತು. ಆದ್ದರಿಂದ ವೈಸ್‌ ರಾಯ್‌ ಅವರನ್ನೂ ಸಮಾವೇಶಕ್ಕೆ ಆಹ್ವಾನಿಸಿದು.

ದಕ್ಷಿಣ ಆಫ್ರಿಕದಲ್ಲಿ ಬ್ರಿಟಿಷರು ವಿಶ್ವಾಸ ದ್ರೋಹ ಮಾಡಿದ್ದರೂ ಸಹ ಈ ಯುದ್ದದಲ್ಲಿ ಭಾರತವು ಅವರಿಗೆ ನೆರವಾಗುವುದಾಗಿ ಗಾಂಧಿ ಘೋಷಿಸಿದರು. ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡುತ್ತಾರೆ ಎಂದು ಮೊದಲಿನಂತೆ ವಿಶ್ವಾಸವಿಟ್ಟರು. ನೇರ ರಣರಂಗಕ್ಕಿಳಿದು ಬ್ರಿಟಿಷರ ಪರವಾಗಿ ಕಾದಾಡುವ ಸಿಪಾಯಿಗಳನ್ನು ಸೇನೆಗೆ ಭರ್ತಿ ಮಾಡಿಸಲು ಖುದ್ದಾಗಿ ನೆರವಾದರು. ಆದರೆ ಬ್ರಿಟಿಷರಿಂದ ಮೊದಲಿನಂತೆಯೇ ವಿಶ್ವಾಸ ಘಾತುಕತನವಾಯಿತು.

LEAVE A REPLY

Please enter your comment!
Please enter your name here