ಮಂಗಳೂರು : ಫೋರ್ಬ್ಸ್ ಮ್ಯಾಗಜೀನ್ ವಿಶ್ವದ ಮೊದಲ ಹತ್ತು ಶ್ರೀಮಂತ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಬಾರಿ ಫೋರ್ಬ್ಸ್ ಮ್ಯಾಗಜೀನ್ ಪ್ರಕಟಿಸಿದ ಅತ್ಯಂತ ಶ್ರೀಮಂತ ಬಿಲಿಯನೇರ್ ಗಳಲ್ಲಿ ಎಲಾನ್ ಮಸ್ಕ್ ಮೊದಲ ಸ್ಥಾನದಲ್ಲಿದ್ದಾರೆ. ಟ್ವಿಟರ್ ಸಿಇಓ ಹಾಗೂ ಉದ್ಯಮಿ ಎಲಾನ್ ಮಸ್ಕ್ 240.7 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ವಿಶ್ವದ ಅತೀ ದೊಡ್ಡ ಐಷಾರಾಮಿ ಸರಕುಗಳ ಕಂಪೆನಿ ಮೊಯೆಟ್ ಹೆನ್ನೆಸ್ಸಿ ಲೂಯಿ ವಿಟಾನ್ ನ ಸಿಇಓ ಬರ್ನಾರ್ಡ್ ಅರ್ನಾಲ್ಟ್ 231.4 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಮೂರನೇ ಸ್ಥಾನವನ್ನು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಪಡೆದುಕೊಂಡಿದ್ದಾರೆ. ಒರಾಕಲ್ ಸಾಫ್ಟ್ವೇರ್ ನ ಸಿಇಒ ಆಗಿದ್ದ ಲ್ಯಾರಿ ಎಲಿಸನ್ ನಾಲ್ಕನೇ ಸ್ಥಾನದಲ್ಲಿದ್ದು, ಬಿಲ್ ಗೇಟ್ಸ್ ಐದನೇ ಸ್ಥಾನದಲ್ಲಿದ್ದಾರೆ. ಅತ್ಯಂತ ನಿಪುಣ ಹೂಡಿಕೆದಾರರು ಎಂದೇ ಪರಿಗಣಿಸಲ್ಪಟ್ಟಿರುವ ವಾರೆನ್ ಬಫೆಟ್ ವಿಶ್ವದ ಆರನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅಮೇರಿಕನ್ ಬಿಲಿಯನೇರ್, ಕಂಪ್ಯೂಟರ್ ಪ್ರೋಗ್ರಾಮರ್, ಇಂಟರ್ನೆಟ್ ಉದ್ಯಮಿಯಾದ ಮಾರ್ಕ್ ಜುಕರ್ಬರ್ಗ್ ಏಳನೇ ಸ್ಥಾನದಲ್ಲಿದ್ದು, ಎಂಟನೇ ಸ್ಥಾನದಲ್ಲಿ ಅಮೆರಿಕದ ಬಿಲಿಯನೇರ್ ಉದ್ಯಮಿ ಎನಿಸಿಕೊಂಡಿರುವ ಲ್ಯಾರಿ ಪೇಜ್ ಇದ್ದಾರೆ. ಗೂಗಲ್ನ ಸಹ-ಸಂಸ್ಥಾಪಕರಾಗಿರುವ ಸೆರ್ಗೆ ಬ್ರಿನ್ ಒಂಬತ್ತನೇ ಸ್ಥಾನದಲ್ಲಿದ್ದು, ನ್ಯಾಷನಲ್ ಬಾಸ್ಕೆಟ್ಬಾಲ್ ಅಸೋಸಿಯೇಷನ್ನ ಲಾಸ್ ಏಂಜಲೀಸ್ ಕ್ಲಿಪ್ಪರ್ಸ್ನ ಮಾಲಕ ಸ್ಟೀವ್ ಬಾಲ್ಮರ್ ಅವರು ವಿಶ್ವದ ಶ್ರೀಮಂತ ನಾಯಕರ ಪೈಕಿ 10 ನೇ ಸ್ಥಾನದಲ್ಲಿದ್ದಾರೆ.