ಮಂಗಳೂರು: ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಅರಳಸುರಳಿಯ ಕೇಕೊಡ್ ಬಳಿ ಒಂದೇ ಕುಟುಂಬದ 4 ಮಂದಿ ಸಜೀವದಹನವಾಗಿದ್ದು, ಓರ್ವನನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾದ ಘಟನೆ ಅ.8ರಂದು ನಡೆದಿದೆ.
ಮನೆಯೊಳಗೆ ಕಟ್ಟಿಗೆಗೆ ಬೆಂಕಿ ಹಚ್ಚಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ದುರಂತದಲ್ಲಿ ಅರ್ಚಕ ವೃತ್ತಿಯಲ್ಲಿದ್ದ ಕುಟುಂಬದ ಹಿರಿಯ ರಾಘವೇಂದ್ರ ಕೇಕೊಡ್ (65), ಪತ್ನಿ ನಾಗರತ್ನ(55), ಹಿರಿಯ ಪುತ್ರ ಶ್ರೀರಾಮ್(30) ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿದ್ದಾರೆ. ಇನ್ನೋರ್ವ ಪುತ್ರ ಭರತ್(28) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತಂತೆ ನಿಖರವಾದ ಕಾರಣ ತಿಳಿದು ಬಂದಿಲ್ಲ.