ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕಾ ಬೋಟ್ ಗೆ ಆಕಸ್ಮಿಕ ಬೆಂಕಿ

ಮಂಗಳೂರು: ಹರ್ಷೋಧಯ ಎಂಬ ಮೀನುಗಾರಿಕಾ ಬೋಟ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ನಗರದ ಹಳೆಬಂದರು ದಕ್ಕೆಯಲ್ಲಿ ಇಂದು (ಅ.10) ಮುಂಜಾನೆ ನಡೆದಿದೆ.

ಮುಂಜಾನೆ ಸುಮಾರು 5 ಗಂಟೆಗೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಬೋಟ್‌ ಗೆ ಬೆಂಕಿ ತಗುಲಿರುವುದನ್ನು ಗಮನಿಸಿದ ಪಕ್ಕದ ಬೋಟ್‌ನವರು ಬೆಂಕಿ ಹತ್ತಿಕೊಂಡ ಬೋಟನ್ನು ದೂರ ಸರಿಸುವ ಮೂಲಕ ಇತರ ಬೋಟ್ ಗಳಿಗೆ ಬೆಂಕಿ‌ ಹರಡುವುದನ್ನು ತಪ್ಪಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಪಾಂಡೇಶ್ವರ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಂಗರು ಹಾಕಿದ್ದ ದೋಣಿಯಲ್ಲಿದ್ದ ಡೀಸೆಲ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ಆದರೆ ಹಗ್ಗ ಬಿಚ್ಚಿ ಬಿಟ್ಟಿದ್ದರಿಂದ ದೋಣಿ ಕೆಲವು ದೂರ ನೀರಿನಲ್ಲಿ ಸಾಗಿತ್ತು. ಹಾಗಾಗಿ ಇತರ ದೋಣಿಗಳಿಗೆ ಬೆಂಕಿ ತಗುಲುವುದು ತಪ್ಪಿದೆ’ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here