ಬೆಂಗಳೂರು ಕಂಬಳ-ನಮ್ಮ ಕಂಬಳ – ಕರೆಪೂಜೆ ಸಮಾರಂಭದಲ್ಲಿ ಡಿ ವಿ ಎಸ್‌ ಸ್ವಾರಸ್ಯಕರ ಮಾತು

ಮಂಗಳೂರು: ಇಂದು ಬೆಂಗಳೂರಿನಲ್ಲಿ ನಡೆದ “ಬೆಂಗಳೂರು ಕಂಬಳ-ನಮ್ಮ ಕಂಬಳ” ಕರೆಪೂಜೆ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದಗೌಡ ತಮ್ಮ ಸ್ವಾರಸ್ಯಕರ ಮಾತಿನ ಮೂಲಕ ಎಲ್ಲರ ಗಮನ ಸೆಳೆದರು.

ತಮ್ಮ ಭಾಷಣದ ಆರಂಭದಲ್ಲಿ ಒಂದೊಮ್ಮೆ ನನ್ನ ಶಿಷ್ಯರಾಗಿದ್ದ ಅಶೋಕ್‌ ರೈ ಈಗ ಡಿಕೆ ಶಿವಕುಮಾರ್‌ ಶಿಷ್ಯರಾಗಿದ್ದಾರೆ ಎಂದು ಹೇಳುವ ಮೂಲಕ ಗುರು ಶಿಷ್ಯ ಸಂಬಂಧವನ್ನು ನೆನಪಿಸಿ ಎಲ್ಲರ ಕರತಾಡನ ಪಡೆದರು. ಇನ್ನು ಅಶ್ವಥನಾರಾಯಣ ರವರೇ, ನಿಮಗೆ ನೀಡುವ ಆಹಾರಕ್ಕಿಂತ ಮಿಗಿಲಾದ ಆಹಾರ ಕೋಣಗಳಿಗೆ ಕೊಡಲಾಗುತ್ತಿದೆ ಎಂದು ಹಾಸ್ಯ ಚಟಾಕಿಯನ್ನು ಹಾರಿಸಿ ಬಿಟ್ಟು ಎಲ್ಲರ ಮುಖದಲ್ಲಿ ನಗು ಅರಳುವಂತೆ ಮಾಡಿದರು. ಭಾವನಾತ್ಮಕ ಸಂಬಂಧ ಬೆಳೆಸುವವರು ದ.ಕ ದವರು ಎಂದು ಹೆಗ್ಗಳಿಕೆಯ ಮಾತನ್ನಾಡಿ, ದ. ಕನ್ನಡಿಗರು ತಲುಪದ ಕ್ಷೇತ್ರವೇ ಇಲ್ಲ ಸಿನಿಮಾ ಜಗತ್ತಿನಿಂದ ಹಿಡಿದು ಭೂಗತ ಜಗತ್ತಿನ ವರೆಗೂ ದ.ಕನ್ನಡಿಗರು ತಲುಪಿದ್ದಾರೆ ಎಂದು ಹೇಳುವ ಮೂಲಕ ಭರಪೂರ ಚಪ್ಪಾಳೆ ಗಿಟ್ಟಿಸಿಕೊಂಡರು. ಒಂದು ಭಾಗಕ್ಕೆ ಸೀಮಿತವಾಗಿದ್ದ ಕಂಬಳ ಈಗ ದೇಶ ವ್ಯಾಪಿಯಾಗಿದೆ. ಪ್ರಾಣಿಗಳಿಗೆ ಮನುಷ್ಯರ ರೀತಿ ತರಬೇತಿ ಮಾಡುವ ಮಾನವೀಯತೆ ಕಂಬಳದಲ್ಲಿ ಕಾಣಸಿಗುತ್ತದೆ ಎಂದು ಕಳಕಳಿಯಿಂದ ಭಾವುಕರಾದ ಡಿ ವಿ ಚೀಲದಲ್ಲಿ ತಲೆ ಇಟ್ಟುಕೊಂಡಿರುವ ಬುದ್ಧಿ ಜೀವಿಗಳ ವಿರೋಧಕ್ಕೆ ಮುನ್ನ ಮಳೆ ಬಂದಿರುವುದು ಸಂತೋಷದ ವಿಷಯ ಎಂದು ಬುದ್ದಿಜೀವಿಗಳ ಕಾಲೆಳೆಯಲು ಮಾತ್ರ ʼಪ್ರಾಯಶಃʼ ಅವರು ಮರೆಯಲಿಲ್ಲ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here