ಮಂಗಳೂರು/ಪುತ್ತೂರು: ಭಾರತ ದೂರ ಸಂಪರ್ಕ ಇಲಾಖೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ವಿಪತ್ತು ಸಂದರ್ಭದಲ್ಲಿ ದೇಶದ ಜನತೆಗೆ ಮೊಬೈಲ್ ಮೂಲಕ ಎಚ್ಚರಿಕೆಯ ಸಂದೇಶವನ್ನು ನೀಡುವ ಬಗ್ಗೆ ಇಂದು ಪ್ರಾಯೋಗಿಕ ಪರೀಕ್ಷೆ ನಡೆಸಿದೆ.
ಇಂದು ಬೆಳಿಗ್ಗೆ 11.45ರ ಸುಮಾರಿಗೆ ಧ್ವನಿ ಮತ್ತು ಕಂಪನದೊಂದಿಗೆ ಮೊಬೈಲ್ ಗಳಿಗೆ ಎಚ್ಚರಿಕೆ ಸಂದೇಶ ಬಂದಿದೆ. ಸಂದೇಶದ ಬಗ್ಗೆ ಮಾಹಿತಿ ಪಡೆದಿದ್ದವರು ಖುಷಿ ಪಟ್ಟರೆ, ಮಾಹಿತಿ ಇಲ್ಲದೇ ಇರುವವರು ಮೊಬೈಲ್ ನ ಬೀಪ್ ಶಬ್ಧ ಮತ್ತು ಧ್ವನಿ ಸಂದೇಶಕ್ಕೆ ಆತಂಕ ಪಡುವಂತಾಯಿತು. ಈ ಪ್ರಯೋಗವನ್ನು ದೇಶದ ಹಲವು ಪ್ರದೇಶಗಳಲ್ಲಿ ಬೇರೆಬೇರೆ ಸಮಯದಲ್ಲಿ ಮಾಡಲಾಗಿದೆ. ಈ ಎಚ್ಚರಿಕೆ ಸಂದೇಶ ವಿಪತ್ತು ಸಂದರ್ಭಗಳಲ್ಲಿ ಜನರನ್ನು ಎಚ್ಚರಿಸುವ ಯೋಜಿತ ಪರಿಕ್ಷಾ ಪ್ರಕ್ರಿಯೆಯ ಭಾಗವಾಗಿದೆ. ಆತಂಕ ಪಡುವ ಅಗತ್ಯವಿಲ್ಲ ಎಂದು ಭಾರತ ದೂರಸಂಪರ್ಕ ಇಲಾಖೆ ತಿಳಿಸಿದೆ.