ಇಸ್ರೇಲ್‌ನಿಂದ ಭಾರತೀಯರ ತೆರವು – ಇಂದಿನಿಂದ ‘ಆಪರೇಷನ್‌ ಅಜಯ್’‌ ಕಾರ್ಯಾಚರಣೆ

ಮಂಗಳೂರು(ನವದೆಹಲಿ): ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರ ನಡುವಿನ ಸಮರದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ 18 ಸಾವಿರ ಭಾರತೀಯ ನಾಗರಿಕರ ರಕ್ಷಣೆಗೆ ಭಾರತ ಸರ್ಕಾರವು ‘ಆಪರೇಷನ್‌ ಅಜಯ್’‌ ಘೋಷಿಸಿದೆ.

ಇಂದಿನಿಂದ ‘ಆಪರೇಷನ್‌ ಅಜಯ್’‌ ಕಾರ್ಯಾಚರಣೆ ಆರಂಭವಾಗಲಿದ್ದು, ಮೊದಲ ವಿಮಾನ ದೇಶದಿಂದ ತೆರಳಿದೆ ಎಂದು ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಟ್ವೀಟ್ ಮಾಡಿದ್ದಾರೆ. ಕನ್ನಡಿಗರು ಸೇರಿ ಎಲ್ಲ ರಾಜ್ಯಗಳ ನಾಗರಿಕರನ್ನು ವಿಶೇಷ ಚಾರ್ಟರ್ಡ್‌ ವಿಮಾನಗಳ ಮೂಲಕ ದೇಶಕ್ಕೆ ಕರೆತರಲಾಗುತ್ತಿದೆ. ಇದಕ್ಕಾಗಿ ಇಸ್ರೇಲ್ ನಲ್ಲಿ ರಾಯಭಾರ ಕಚೇರಿ ಮೊದಲ ವಿಮಾನದಲ್ಲಿ ಸ್ವದೇಶಕ್ಕೆ ಮರಳಲು ಬಯಸುವವರ ವಿವರ ಸಂಗ್ರಹಿಸಿದ್ದು,ಅವರಿಗೆ ಈಗಾಗಲೇ ವಿಮಾನದ ವಿವರಗಳನ್ನು ನೀಡಲಾಗಿದೆ. ಇದಲ್ಲದೇ ಇಸ್ರೇಲ್‌ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ದೆಹಲಿಯಲ್ಲಿ ಕಂಟ್ರೋಲ್‌ ರೂಮ್‌ ಸ್ಥಾಪಿಸಿದೆ. ಟೆಲ್‌ ಅವಿವ್‌ ಹಾಗೂ ರಾಮಲ್ಲಾಹ್‌ನಲ್ಲಿ ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ದಿನದ 24 ಗಂಟೆಯೂ ಸ್ಪಂದಿಸುವ ದಿಸೆಯಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ.

 

 

LEAVE A REPLY

Please enter your comment!
Please enter your name here