ಮಂಗಳೂರು: ಮುಜರಾಯಿ ವ್ಯಾಪ್ತಿಯ ದೇವಸ್ಥಾನದ ಅರ್ಚಕರಿಗೆ ಸಿದ್ದರಾಮಯ್ಯ ಸರ್ಕಾರ ಬಂಪರ ಕೊಡುಗೆ ಘೋಷಿಸಿದೆ. ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಅರ್ಚಕರು ಮೃತಪಟ್ಟರೆ 2 ಲಕ್ಷ ಪರಿಹಾರ ಕೊಡುವುದಾಗಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಅ.14 ರಂದು ಬೆಂಗಳೂರಿನಲ್ಲಿ ನಡೆದ ಧಾರ್ಮಿಕ ಪರಿಷತ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಅರ್ಚಕರಿಗೆ ಅಯುಷ್ಮಾನ ಭಾರತ ಯೋಜನೆಯಡಿ ಆರೋಗ್ಯ ಕಾರ್ಡ್ ಅಲ್ಲದೆ ವರ್ಷಕ್ಕೆ 1200 ಅರ್ಚಕರನ್ನು ಉಚಿತವಾಗಿ ಕಾಶಿ ಯಾತ್ರೆಗೆ ಕಳುಹಿಸಲು ಸರಕಾರ ನಿರ್ಧರಿಸಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಅರ್ಚಕರು ಮತ್ತು ನೌಕರರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವುದಾಗಿ ಹೇಳಿದ್ದು, ಪಿ ಯು ಸಿ, ಡಿಪ್ಲೋಮಾ, ಐಟಿಐ ವ್ಯಾಸಂಗ ಮಾಡುವವರಿಗೆ 5 ಸಾವಿರ ರೂಪಾಯಿ ಮತ್ತು ಪದವಿ ವ್ಯಾಸಂಗ ಮಾಡುವವರಿಗೆ 7 ಸಾವಿರ ರೂಪಾಯಿ, ಸ್ನಾತಕೋತ್ತರ ವ್ಯಾಸಂಗ ಮಾಡುವವರಿಗೆ 15 ಸಾವಿರ, ಆಯುರ್ವೇದ, ಹೋಮಿಯೋಪತಿಗೆ 25 ಸಾವಿರ ರೂಪಾಯಿ, ವೈದ್ಯಕೀಯ, ದಂತ ವೈದ್ಯಕೀಯ ಕಲಿಯುತ್ತಿರುವವರಿಗೆ 50 ಸಾವಿರ ಪ್ರೋತ್ಸಾಹಧನ ನೀಡುವದಾಗಿ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.