ಗಾಂಧಿ-ಸಂಕ್ಷಿಪ್ತ ಜೀವನ ಕಥನ – 21

ಸುಧಾರಣಾವಾದಿ ಗಾಂಧೀಜಿ ಆದರ್ಶಗಳು

ಹಳ್ಳಿಗಳೇ ಭಾರತದ ದೇಶದ ಜೀವಾಳ ಎಂಬುದು ಗಾಂಧಿಯವರ ಅಚಲವಾದ ನಂಬಿಕೆಯಾಗಿತ್ತು. ಚರಕವನ್ನು ಗ್ರಾಮೀಣ ಬದುಕಿನ ಏಳಿಗೆಯ ಸಂಕೇತವಾಗಿ ಅವರು ರೂಪಿಸಿದರು. ಖಾದಿ ಉತ್ಪಾದನೆಯು ಗ್ರಾಮೋದ್ಯೋಗವೆಂದು ಬಣ್ಣಿಸಿದರು. ಅದನ್ನು ಜನಗಳ ನಡುವೆ ಕೊಂಡೊಯ್ದು ನೂಲುವುದನ್ನು ಮತ್ತು ಖಾದಿ ತಯಾರಿಕೆಯನ್ನು ವ್ಯಾಪಕವಾಗಿ ರೂಢಿಗೆ ತಂದರು. ಹಳ್ಳಿಯ ಬಡವರ ಮತ್ತು ಶ್ರೀಮಂತ ಜಮೀನುದಾರರ ನಡುವೆ ಇರುವ ಅಂತರವನ್ನು ನಿವಾರಿಸಲು ಪ್ರಯತ್ನ ಮಾಡಿದರು. ಭೂಮಿಯನ್ನು ಬಡವರಿಗೆ ಹಂಚುವ “ವಿಶ್ವಸ್ಥ-ವ್ಯವಸ್ಥೆ”ಯನ್ನು ಸ್ಥಾಪಿಸುವ ಪ್ರಯತ್ನವನ್ನು ಮಾಡಿದರು. ಇದರಿಂದ ಆರ್ಥಿಕ ಸಮಾನತೆಯನ್ನು ತರುವುದು ಸಾಧ್ಯ ಎಂದೂ ಅವರು ನಂಬಿದ್ದರು. ಇದನ್ನು ಗಾಂಧಿ-ಸಮಾಜವಾದ ಎನ್ನುತ್ತೇವೆ.

LEAVE A REPLY

Please enter your comment!
Please enter your name here