



ಮಂಗಳೂರು: ಮಂಗಳೂರು ದಸರಾ ಪ್ರಯುಕ್ತ ಸ್ಯಾಂಡೀಸ್ ಕಂಪೆನಿ ಆರ್ಪಿಸುವ, ಜನಪ್ರಿಯ ಶಾಸಕ ಉಮಾನಾಥ ಕೋಟ್ಯಾನ್ ಸಾರಥ್ಯದಲ್ಲಿ ಪ್ರಥಮ ಬಾರಿಗೆ “ಮಂಗಳೂರು ದಸರಾ 2023 ಸ್ಟಾರ್ ಮ್ಯೂಸಿಕಲ್ ನೈಟ್” ಕಾರ್ಯಕ್ರಮವು ಅ.21ರಂದು ಸಂಜೆ ಗಂಟೆ 6.30ಕ್ಕೆ ಸರಿಯಾಗಿ ಲೇಡಿಹಿಲ್ ನ ಪಾಂಪೆ ಚರ್ಚ್ ಗ್ರೌಂಡ್ ನಲ್ಲಿ ನಡೆಯಲಿದೆ.







ಈ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರಂಭದಲ್ಲಿ ಖ್ಯಾತ ಸಂಗೀತ ನಿರ್ದೆಶಕ ಗುರುಕಿರಣ್, ಹಿನ್ನಲೆ ಗಾಯಕಿಯರಾದ ಅನುರಾಧಾ ಭಟ್, ಸುಪ್ರಿಯಾ ರಾಮ್, ಕಲಾವತಿ ದಯಾನಂದ್, ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡಗ, ಅರವಿಂದ ಕೆ.ಪಿ, ನಾಯಕನಟರಾದ ವಿಕ್ರಂ ರವಿಚಂದ್ರನ್, ರಕ್ಷರಾಮ್, ಸರಿಗಮಪ ಖ್ಯಾತಿಯ ಕಲಾವಿದರು ಭಾಗವಹಿಸಿ, ರಂಜಿಸಲಿದ್ದಾರೆ. ಅಲ್ಲದೇ ಅನೇಕ ಸ್ಥಳೀಯ ಕಲಾವಿದರು ಪ್ರತಿಭೆಗಳ ಜೊತೆಗೆ ಕರಾವಳಿಯ ಶಾಸಕರು, ಸಂಸದರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಸಂಘಟಕರಾದ ಸಂದೇಶ್, ಶಾಸಕ ಉಮಾನಾಥ್ ಕೋಟ್ಯಾನ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.















