ಮಂಗಳೂರು/ಪುತ್ತೂರು: ಕೋಸ್ಟಲ್ ವುಡ್ ನ ಬಹುನಿರೀಕ್ಷಿತ ತುಳುಚಿತ್ರ ‘ಪುಳಿಮುಂಚಿ’ ಬಿಡುಗಡೆಗೆ ಸಿದ್ದವಾಗಿದ್ದು ಅ. 21 ರಂದು ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ಪ್ರೀಮಿಯರ್ ಪ್ರದರ್ಶನ ನಡೆಯಲಿದೆ.
ಹೊಸತನ, ವೈವಿಧ್ಯತೆ, ನವಿರಾದ ಹಾಸ್ಯದೊಂದಿಗೆ ಪುಳಿಮುಂಚಿ ತುಳುನಾಡಿನ ಚಿತ್ರಮಂದಿರಗಳಲ್ಲಿ ಅ.27 ರಂದು ಬಿಡುಗಡೆಯಾಗಲಿದೆ.
ವಿನೀತ್ ಕುಮಾರ್ ನಾಯಕ ನಟನಾಗಿ, ಸಮತಾ ಅಮೀನ್ ನಾಯಕಿಯಾಗಿ ನಟಿಸಿರುವ ಈ ಚಿತ್ರಕ್ಕೆ ತ್ರಿಶೂಲ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. ಪುತ್ತೂರಿನ ಹರಿಪ್ರಸಾದ್ ರೈ ನಿರ್ಮಾಣದ ಪುಳಿಮುಂಚಿಗೆ ದೇವಿಪ್ರಸಾದ್ ಜಿ.ಎಸ್., ಪೂರ್ಣಿಮಾ, ಮೇಘನಾಥ್ ಶೆಟ್ಟಿ, ಕಿಶೋರ್ ಕುಮಾರ್ ಶೆಟ್ಟಿ ಸಹನಿರ್ಮಾಪಕರಾಗಿದ್ದಾರೆ. ತಾನ್ಯ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣಗೊಂಡ ಈ ಚಿತ್ರಕ್ಕೆ ಕಿಶೋರ್ ಕುಮಾರ್ ಶೆಟ್ಟಿ ಸಂಗೀತ ನೀಡಿದ್ದಾರೆ. ಮಯೂರ್ ಆರ್. ಶೆಟ್ಟಿ ಸಾಹಿತ್ಯವಿದೆ. ಹಾಸ್ಯ ದಿಗ್ಗಜರಾದ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ರವಿ ರಾಮಕುಂಜ, ಸಾಯಿಕಿರಣ್ ಕುಡ್ಲ, ಸಂದೀಪ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಉಮೇಶ್ ಮಿಜಾರು, ಪಿಂಕಿರಾಣಿ, ಸಂತೋಷ್ ಶೆಟ್ಟಿ, ಅದ್ವಿಕಾ ಶೆಟ್ಟಿ ಪ್ರಧಾನ ಭೂಮಿಕೆಯಲ್ಲಿದ್ದು, ‘ಪುಳಿಮುಂಚಿ’ಯ ಸ್ವಾದ ಇಮ್ಮಡಿಯಾಗಿದೆ.