ಮಂಗಳೂರು(ಶ್ರೀಹರಿಕೋಟಾ): ಗಗನಯಾನ ಮಿಷನ್‌ನ ಮೊದಲ ಪರೀಕ್ಷಾರ್ಥ ಉಡಾವಣೆಯನ್ನು ಇಂದು ಸಮಸ್ಯೆಯೊಂದರಿಂದಾಗಿ ಉಡಾವಣೆಗೆ 5 ಸೆಕೆಂಡ್‌ಗಳಿರುವಾಗ ತಡೆಹಿಡಿದ ಇಸ್ರೋ 10 ಗಂಟೆಗೆ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿದೆ.
ಮಾನವ ಸಹಿತ ಗಗನಯಾನ ಮಿಷನ್‌ಗೆ ಮೊದಲ ಮಾನವರಹಿತ ಪರೀಕ್ಷಾರ್ಥ ಪ್ರಯೋಗ ಇಂದು ಬೆಳಿಗ್ಗೆ 8 ಗಂಟೆಗೆ ನಿಗದಿಯಾಗಿತ್ತು. ನಂತರ ಅದನ್ನು 8.45ಕ್ಕೆ ಮುಂದೂಡಲಾದರೂ 8.45ಕ್ಕೆ 5 ಸೆಕೆಂಡ್ ಮುಂಚಿತವಾಗಿ ಉಡಾವಣೆಯನ್ನು ತಡೆಹಿಡಿಯಲಾಯಿತು. ಇಂಜಿನ್ ಇಗ್ನಿಷನ್ ಸಮಸ್ಯೆಯೆಂದು ತಿಳಿದು ಬಂದಿದೆಯಾದರೂ ಅದಕ್ಕೆ ಸ್ಪಷ್ಟ ಕಾರಣವನ್ನು ಇಸ್ರೋ ಮುಖ್ಯಸ್ಥ ಸೋಮನಾಥ್ ನೀಡಿರಲಿಲ್ಲ. ದೋಷಗಳನ್ನು ಪತ್ತೆಹಚ್ಚಿ ಸರಿಪಡಿಸಲಾಗಿದೆ ಎಂದು ಹೇಳಿರುವ ಇಸ್ರೋ 10 ಗಂಟೆಗೆ ಯಶಸ್ವಿ ಉಡಾವಣೆ ನಡೆಸಿದೆ. ಗಗನಯಾನ ಮಿಷನ್ ಭಾಗವಾಗಿ ಗಗನಯಾನಿಗಳ ಎಸ್ಕೇಪ್ ಸಿಸ್ಟಂ ನಿರ್ವಹಣೆಯನ್ನು ಪ್ರದರ್ಶಿಸಲು ಈ ಫ್ಲೈಟ್ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್ ಪ್ರಯೋಗ ನಡೆಸಲಾಗಿದೆ.