ದೇಶದ ವಿಭಜನೆ ಕೋಮುಗಳ ಸಹಬಾಳ್ವೆಗಾಗಿ ಗಾಂಧೀಜಿ ಸತ್ಯಾಗ್ರಹ
ಅದೇ ದಿನ ಭಾರತವು ವಿಭಜನೆಯಾಯಿತು. ಪಾಕಿಸ್ತಾನವು ಸ್ವತಂತ್ರ ದೇಶವಾಗಿ ಅಸ್ತಿತ್ವಕ್ಕೆ ಬಂದಿತು. ಭಾರತದ ಮತ್ತು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗಡಿ ಭಾಗದ ನಿವಾಸಿಗಳು ಆಯಾ ದೇಶಗಳಿಗೆ ಗುಳೆ ಹೋದರು. ಇದು ಅಸಹನೀಯ ಸಂಕಷ್ಟಗಳಿಗೆ ಕಾರಣವಾಯಿತು. ಹಿಂದೂ, ಸಿಖ್ ಮತ್ತು ಮುಸ್ಲಿಮರ ನಡುವೆ ಸ್ಪೋಟಗೊಂಡಿತು. ಕೊಲೆ ಮತ್ತು ಪ್ರತೀಕಾರದ ಕೊಲೆಗಳಲ್ಲಿ ಸುಮಾರು 10 ಲಕ್ಷ ಜನ ಪ್ರಾಣ ಕಳೆದುಕೊಂಡರು. ಈ ಮೂರೂ ಸಮುದಾಯಗಳ ಸುಮಾರು 14 ದಶಲಕ್ಷ ಜನ ನಿರಾಶ್ರಿತರು ವಲಸೆಗಾರರಾದರು. ಇದೊಂದು ಭೀಕರ ಅಮಾನವೀಯ ಸನ್ನಿವೇಶವಾಗಿತ್ತು. ದೆಹಲಿಯಲ್ಲಿ ಪರಸ್ಪರ ಹಿಂಸಾಚಾರಗಳು ನಡೆದವು. ಗಾಂಧಿ ಅಮರಣಾಂತ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದರು. ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಮುಖಂಡರುಗಳು ಹಿಂಸಾಚಾರ ತೊರೆದು ಸೌಹಾರ್ದಯುತವಾಗಿ ವಾಸಿಸುತ್ತೇವೆ ಎಂದು ವಚನ ನೀಡಿದರು. ಗಾಂಧಿ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದರು.