ಪಾಣೆಮಂಗಳೂರು ಸೇತುವೆ ಮೇಲೆ ಘನವಾಹನಗಳ ಸಂಚಾರಕ್ಕೆ ತಡೆ – ಸೇತುವೆಯ ಇಕ್ಕೆಲಗಳಲ್ಲಿ ಕಬ್ಬಿಣದ ಕಮಾನು ಅಳವಡಿಕೆ-ಟೆಂಪೊ ಡಿಕ್ಕಿ ನೆಲಕ್ಕುರುಳಿದ ಕಮಾನು

ಮಂಗಳೂರು(ಬಂಟ್ವಾಳ): ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ಘನವಾಹನಗಳ ಸಂಚಾರವನ್ನು ತಡೆಯಲು ಹಾಕಲಾಗಿದ್ದ ಕಬ್ಬಿಣದ ತಡೆ ಕಮಾನಿಗೆ ವಾಹನವೊಂದು ಅ.21ರ ಶನಿವಾರ ಬೆಳಗ್ಗೆ ಡಿಕ್ಕಿಯಾಗಿದ್ದು ಕಮಾನು ಕುಸಿದು ಬಿದ್ದಿದೆ. 1914ರಲ್ಲಿ ಬ್ರಿಟಿಷರಿಂದ ನಿರ್ಮಾಣಗೊಂಡ ಪಾಣೆಮಂಗಳೂರು ಉಕ್ಕಿನ ಸೇತುವೆಯ ಮಧ್ಯ ಭಾಗದಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಘನಗಾತ್ರದ ವಾಹನಗಳ ಸಂಚಾರವನ್ನು ತಡೆಯಲು ಸೇತುವೆಯ ಇಕ್ಕೆಲಗಳಲ್ಲಿ ಕಬ್ಬಿಣದ ಕಮಾನು ಹಾಕಲಾಗಿತ್ತು.

ಗೂಡ್ಸ್‌ ಟೆಂಪೋವೊಂದು ಕಮಾನು ಅಳವಡಿಸಿದ ಹೊರತಾಗಿಯು ಈ ರಸ್ತೆಯಲ್ಲಿ ಸಂಚರಿಸಿದ ಪರಿಣಾಮ ಕಮಾನು ರಾಡ್‌ ಕೆಳಕ್ಕುರುಳಿದೆ. ಇದರಿಂದ ಕೆಲಕಾಲ ಸಣ್ಣ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದ್ದು ಸ್ಥಳೀಯರು ರಾಡನ್ನು ಮೇಲೆತ್ತಿಡುವ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಸೇತುವೆ ಮಧ್ಯ ಭಾಗದಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಘನಗಾತ್ರದ ವಾಹನಗಳು ಸಂಚಾರ ಮಾಡಿದರೆ ಮುರಿದು ಬೀಳುವ ಅವಕಾಶಗಳು ಇವೆ ಎಂದು ಸ್ಥಳೀಯ ಪೋಲೀಸರು ಕಂದಾಯ ಇಲಾಖೆ ಮತ್ತು ಪುರಸಭೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ‌ಆಗಮಿಸಿದ ಇಲಾಖೆಯ ಅಧಿಕಾರಿಗಳು ಘನಗಾತ್ರದ ವಾಹನಗಳ ಸಂಚಾರಕ್ಕೆ ನಿಷೇಧ ಹೇರುವ ಉದ್ದೇಶದಿಂದ ಕಮಾನುಗಳ ನಿರ್ಮಾಣ ಮಾಡಲಾಗಿತ್ತು.

 

LEAVE A REPLY

Please enter your comment!
Please enter your name here