ಮಂಗಳೂರು(ಅಬುಧಾಬಿ): ಅಬುಧಾಬಿಯಲ್ಲಿ ನಡೆದ ಯುಎಫ್‌ಸಿ 294 ನೇ ಪಂದ್ಯಾಕೂಟದಲ್ಲಿ ಆಸ್ಟ್ರೇಲಿಯಾದ ಅಲೆಕ್ಸಾಂಡರ್ ವೊಲ್ಕಾನೋವ್ಸ್ಕಿ ವಿರುದ್ಧ ಇಸ್ಲಾಂ ಮಖಚೇವ್ ಭರ್ಜರಿ ಗೆಲುವು ಸಾಧಿಸಿದ್ದು, ಮೊದಲ ಸುತ್ತಿನ 3.06ನೇ ನಿಮಿಷದಲ್ಲೇ ನಾಕೌಟ್ ಮಾಡಿದ್ದಾರೆ. ಆ ಮೂಲಕ ಲೈಟ್ ವೈಟ್ ಚಾಂಪಿಯನ್ ಬೆಲ್ಟ್ ಉಳಿಸಿಕೊಂಡಿದ್ದಾರೆ.
ಮಿಡ್ಲ್ ವೇಯ್ಟ್ ಶ್ರೇಣಿಯಲ್ಲಿ ಕಮರು ಉಸ್ಮಾನ್ ಮತ್ತು ಹಂಝತ್ ಚಿಮೇವ್ ನಡುವೆ ನಡೆದ ಪಂದ್ಯದಲ್ಲಿ ಹಂಝತ್ ಮೊದಲ ಸುತ್ತಿನಲ್ಲೇ ಮುನ್ನಡೆ ಸಾಧಿಸಿದ್ದು, ಒಟ್ಟು ಮೂರು ಸುತ್ತಿನಲ್ಲಿ ಜಯಗಳಿಸಿದ್ದಾರೆ. ಆ ಮೂಲಕ ಯುಎಫ್‌ಸಿಯಲ್ಲಿ ತಮ್ಮ ಅಜೇಯ ದಾಖಲೆಯನ್ನು ಉಳಿಸಿಕೊಂಡಿದ್ದಾರೆ. ಭಾರತದ ಎಮ್‌ಎಮ್‌ಎ ಪಟು ಅಂಶುಲ್ ಜುಬಿಲಿ ಅವರು ಮೈಕ್ ಬ್ರೀಡೆನ್ ವಿರುದ್ಧ ಸೋಲನ್ನು ಒಪ್ಪಿಕೊಂಡಿದ್ದಾರೆ. ಅಂಶುಲ್ ಜುಬಿಲಿ ಅವರು ಅಂಕಗಳಲ್ಲಿ ಮುನ್ನಡೆಯಲ್ಲಿದ್ದರೂ, ಮೈಕ್ ಬ್ರಿಡೇನ್ ಅವರ ಬಲವಾದ ಏಟಿಗೆ ನಾಕ್ಔಟ್ ಆದ್ದರಿಂದ ಸೋಲನುಭವಿಸಬೇಕಾಗಿ ಬಂದಿದೆ.