ನಾಲ್ಕು ವರ್ಷದಿಂದ ಡೀಸೆಲ್ ಬಿಲ್ ಬಾಕಿ – ನ್ಯಾಯಾಲಯದಿಂದ ವಾರೆಂಟ್‌ ಜಾರಿ-ಬಂಧನದ ಬೀತಿಯಲ್ಲಿ ಬಸ್ ಮಾಲಕಿ

ಮಂಗಳೂರು: ಮಂಗಳೂರಿನಲ್ಲಿ ಟೂರ್ ಆಂಡ್ ಟ್ರಾವೆಲ್ಸ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಲೋಕೇಶ್ ಶೆಟ್ಟಿ ಎಂಬವರ ಪತ್ನಿ ಸುಕನ್ಯಾ ಎಲ್ ಶೆಟ್ಟಿ ವಿರುದ್ಧ ಮಂಗಳೂರಿನ ಐದನೇ ಜೆಎಂಎಫ್ ಸಿ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ.

ನಗರದ ಶೇಡಿಗುಡ್ಡೆ ಪಿವಿಎಸ್ ಜಂಕ್ಷನ್ ಬಳಿ ಆರೆಂಜ್ ಟೂರ್ಸ್ ಆಂಡ್ ಟ್ರಾವೆಲ್ಸ್ ಮತ್ತು ಲಕ್ಷ್ಮಿ ಟೂರ್ಸ್ ಆಂಡ್ ಟ್ರಾವೆಲ್ಸ್ ಹೆಸರಿನಲ್ಲಿ ಉದ್ಯಮ ನಡೆಸುತ್ತಿದ್ದು, ಪೆಟ್ರೋಲ್‌ ಬಂಕೊಂದರಲ್ಲಿ ಕೆನರಾ ಬಸ್ ಮತ್ತು ಇತರ ವಾಹನಗಳಿಗೆ ಡೀಸೆಲ್ ಮತ್ತು ಪೆಟ್ರೋಲ್ ನ್ನು ತುಂಬಿಸಿ ಬಿಲ್ ನೀಡದೆ ಬಾಕಿ ಇರಿಸಿದ್ದರು. ಸುಕನ್ಯಾ ಅವರು ನೀಡಿದ್ದ ಎರಡು ಚೆಕ್ ಬೌನ್ಸ್ ಆದ ಹಿನ್ನೆಲೆಯಲ್ಲಿ, ಪೆಟ್ರೋಲ್ ಬಂಕ್ ಮಾಲೀಕರು ಬಸ್ ಮಾಲಕಿ ಸುಕನ್ಯಾ ಶೆಟ್ಟಿ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಆರೋಪಿ ಸುಕನ್ಯಾ ನ್ಯಾಯಾಲಯದ ಮುಂದೆ ಹಾಜರಾಗಿ ಮೂರು ತಿಂಗಳಿನ ಒಳಗೆ ಚೆಕ್ ಮೌಲ್ಯದ ಸಂಪೂರ್ಣ ಮೊತ್ತವನ್ನು ಪಾವತಿಸುವುದಾಗಿ ನ್ಯಾಯಾಲಯಕ್ಕೆ ಒಪ್ಪಿಗೆ ಪತ್ರವನ್ನು ಬರೆದುಕೊಟ್ಟು ಜಾಮೀನು ಪಡೆದುಕೊಂಡಿದ್ದರು. ಆದರೆ, ಆ ಬಳಿಕ ಒಂದು ರೂಪಾಯಿಯನ್ನು ಪಾವತಿಸಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಮಾನ್ಯ ನ್ಯಾಯಾಲಯವು ಆರೋಪಿ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿದೆ.

 

LEAVE A REPLY

Please enter your comment!
Please enter your name here