ವನ್ಯಜೀವಿ ಅಂಗಾಂಗ ಸಂಗ್ರಹ ಪ್ರಕರಣ ಪತ್ತೆಗೆ ವಿಶೇಷ ತಂಡ ರಚನೆ

ಮಂಗಳೂರು(ಬೆಂಗಳೂರು): ವನ್ಯಜೀವಿ ಮತ್ತು ಅದರ ಅಂಗಗಳ ಸಂಗ್ರಹ ಪ್ರಕರಣ ತನಿಖೆಗೆ ವನ್ಯಜೀವಿ ಸಂರಕ್ಷಣಾಧಿಕಾರಿಗಳನ್ನು ಒಳಗೊಂಡ 3 ಸದಸ್ಯರ ಸಮಿತಿಯೊಂದನ್ನು ರಚಿಸಿರುವ ಅರಣ್ಯ ಇಲಾಖೆ ಸೂಕ್ತಕ್ರಮಕ್ಕೆ ಮುಂದಾಗಿದೆ. ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅಂತಿಮ ಆದೇಶ ಹೊರಡಿಸಿದ್ದಾರೆ.

1972ರ ಕಾಯ್ದೆ ಪ್ರಕಾರ ವನ್ಯಜೀವಿಗಳಿಗೆ ಸಂಬಂಧಿಸಿದ ವಸ್ತುಗಳ ಸಂಗ್ರಹ ನಿಷೇಧಿಸಲಾಗಿದೆ. ಇಂತಹ ವಸ್ತುಗಳ ಸಂಗ್ರಹವಿದ್ದಲ್ಲಿ ಅದನ್ನು ಅರಣ್ಯ ಇಲಾಖೆಗೆ ಒಪ್ಪಿಸುವಂತೆ ಇಲ್ಲವಾದಲ್ಲಿ ದೃಡೀಕರಣ ಪತ್ರ ಪಡೆಯುವಂತೆ ಸೂಚಿಲಾಗಿದೆ. ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ವರದಿಯನ್ನು ಒಂದು ವಾರದೊಳಗೆ ಸಲ್ಲಿಸುವಂತೆ ಸಚಿವರು ಆದೇಶದಲ್ಲಿ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here