ಮಂಗಳೂರು: ದುಬೈಯ ಸಲಾವುದ್ದೀನ್ ಎಂಬಲ್ಲಿ ಕರಾವಳಿ ಮೂಲದ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ ಅ.22ರಂದು ನಡೆದಿದೆ.
ಮೃತರನ್ನು ಕೂಳೂರು ಪಂಜಿಮೊಗರು ವಿದ್ಯಾನಗರ ನಿವಾಸಿ ಮುಹಮ್ಮದ್ ಎಂಬವರ ಪುತ್ರ ಅಖ್ತರ್(27) ಎಂದು ಗುರುತಿಸಲಾಗಿದೆ. ಅಖ್ತರ್ ಕಳೆದ 7 ತಿಂಗಳಿನಿಂದ ದುಬೈಯಲ್ಲಿ ಉದ್ಯೋಗದಲ್ಲಿದ್ದರು. ಅ.22ರಂದು ಕರ್ತವ್ಯ ಮುಗಿಸಿ ರೂಮಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಅಖ್ತರ್ ಏಳದಿದ್ದಾಗ ಸಂಗಡಿಗರು ಪರಿಶೀಲಿಸಿದ್ದಾರೆ. ಆ ವೇಳೆ ಅಖ್ತರ್ ನಿಧನರಾಗಿರುವ ವಿಚಾರ ತಿಳಿದಿದೆ. ಮೃತರು ತಂದೆ, ತಾಯಿ, ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.