ಮಂಗಳೂರು(ಬೆಂಗಳೂರು): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ. ನಡ್ಡಾ ಅವರ ಆಹ್ವಾನದ ಮೇರೆಗೆ ಅ.25 ರಂದು ಹೊಸದಿಲ್ಲಿಗೆ ಭೇಟಿ ನೀಡಿದ್ದ ಸದಾನಂದ ಗೌಡ ಅವರಿಗೆ ಮೂರು ದಿನಗಳು ಕಾದರೂ ವರಿಷ್ಠರನ್ನು ಭೇಟಿ ಮಾಡಲು ಸಾಧ್ಯವಾಗದೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.
ಈ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸದಾನಂದ ಗೌಡ, ʼʼಒಂದು ದಿನ ಉಳಿಯಲು ನಡ್ಡಾ ಸೂಚಿಸಿದ್ದರು. ಆದರೆ, ದೇಶದಲ್ಲಿ ಪಂಚ ರಾಜ್ಯಗಳ ಚುನಾವಣೆ ಇದೆ. ಸಾಲು ಸಾಲು ಸಭೆಗಳಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಬ್ಯುಸಿಯಾಗಿದ್ದಾರೆ. ಅಲ್ಲದೇ, ನನಗೆ ಇವತ್ತು ಪಕ್ಷದ ಕೆಲಸದ ಮೇಲೆ ತಮಿಳುನಾಡಿಗೆ ಹೋಗಬೇಕಾಗಿದ್ದರಿಂದ ದೆಹಲಿಯಿಂದ ವಾಪಸ್ ಬಂದೆ. ನಾವು ಪಕ್ಷದ ವ್ಯವಸ್ಥೆಗೆ ಪೂರಕವಾಗಿರಬೇಕು. ಇದನ್ನು ನಕಾರಾತ್ಮಕ ದೃಷ್ಟಿಯಿಂದ ನೋಡಬೇಕಾಗಿಲ್ಲʼʼ ಎಂದು ಸ್ಪಷ್ಟಪಡಿಸಿದ್ದಾರೆ.