ಮಂಗಳೂರು (ಚಂಡೀಗಢ): ಕ್ರೀಡಾ ಸ್ಪರ್ಧೆಯಲ್ಲಿ ಟ್ರ್ಯಾಕ್ಟರ್ ಮೂಲಕ ಸಾಹಸ ಪ್ರದರ್ಶಿಸುತ್ತಿದ್ದ ಸ್ಟಂಟ್ ಮ್ಯಾನ್ ಅದೇ ಟ್ರ್ಯಾಕ್ಟರ್ ಕೆಳಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ಪಂಜಾಬಿನ ಗುರುದಾಸ್ ಪುರ ಜಿಲ್ಲೆಯಲ್ಲಿ ಅ.29ರಂದು ನಡೆದಿದೆ.
ಟೇಟ್ ಗ್ರಾಮದ ಸುಖಮನ್ ದೀಪ್ ಸಿಂಗ್ (29 ವ) ಟ್ರ್ಯಾಕ್ಟರಿನಲ್ಲಿ ಸಾಹಸ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ. ಕ್ರೀಡಾ ಸ್ಪರ್ಧೆಗೆ ತೆರಳಿದ್ದ ಸ್ಟಂಟ್ ಮ್ಯಾನ್ ಸುಖಮನ್ ಸಿಂಗ್ ತನ್ನ ಸರದಿಯ ವೇಳೆ ತಮ್ಮ ಟ್ರ್ಯಾಕ್ಟರಿನ ಮುಂಭಾಗದ ಚಕ್ರಗಳನ್ನು ಗಾಳಿಯಲ್ಲಿ ಮೇಲಕ್ಕೆತ್ತಿ ಸಾಹಸ ಪ್ರದರ್ಶನ ನೀಡುತ್ತಿದ್ದರು. ಅಚಾನಕ್ಕಾಗಿ ಟ್ರ್ಯಾಕ್ಟರ್ ತಲೆಕೆಳಗಾಗಿ ನಿಂತಿದೆ. ತಕ್ಷಣವೇ ಅವರು ಟ್ರ್ಯಾಕ್ಟರ್ ನಿಂದ ಕೆಳಗಿಳಿದಿದ್ದಾರೆ. ಆದರೆ ಚಾಲನೆಯಲ್ಲಿ ಇದ್ದ ಟ್ರ್ಯಾಕ್ಟರ್ ಚಕ್ರಗಳು ತಿರುಗುತ್ತಿದ್ದು, ಸುಖಮನ್ ಸಿಂಗ್ ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಟೈಯರ್ ಗಳನ್ನು ಹಿಡಿದುಕೊಂಡಿದ್ದ ವೇಳೆ ನಿಯಂತ್ರಣ ತಪ್ಪಿ ಹಿಂಬದಿಯ ಚಕ್ರದ ಕೆಳಗೆ ಬಿದ್ದಿದ್ದಾರೆ. ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಿಸುತ್ತಲೇ ಸಾಗಿದ್ದರಿಂದ ಸ್ಟಂಟ್ ಮ್ಯಾನ್ ಅದರಡಿಯಲ್ಲಿ ಸಿಲುಕಿ ಕೊಂಡಿದ್ದಾರೆ. ತಕ್ಷಣ ಆತನನ್ನು ಹೊರಗೆಳೆಯಲು ಯತ್ನಿಸಲಾಯಿತಾದರೂ ವೇಗವಾಗಿ ಚಲಿಸುತ್ತಿದ್ದ ಟ್ರ್ಯಾಕ್ಟರ್ ಸುಖಮನ್ ಸಿಂಗ್ ಮೇಲೆ ಹರಿದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಪಂಜಾಬ್ ಸರಕಾರ ಟ್ರ್ಯಾಕ್ಟರ್ ಸ್ಟಂಟ್ ನಿಷೇಧಿಸಿ ಆದೇಶ ಹೊರಡಿಸಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
A man was crushed to death after a tractor toppled during a stunt in the village Sarchur in Gurdaspur district, Punjab. Om Shanti.
Do not perform such stupid stunts. pic.twitter.com/oscNm2HL2h
— Āryā_Anvikṣā ? (@Arya_Anviksha_) October 29, 2023