



ಮಂಗಳೂರು: ತನ್ನ ಪ್ರಿಯತಮೆಯನ್ನು ಔಟಿಂಗ್ ಗೆ ಕರೆದರೆ ಬರಲಿಲ್ಲ ಎಂದು ಸಿಟ್ಟಿಗೆದ್ದ ಯುವಕನೊಬ್ಬ ಆಕೆ ಕೆಲಸಕ್ಕಿದ್ದ ಪಿಜಿಗೆ ಕಲ್ಲು ತೂರಿದ ಘಟನೆ ಮಂಗಳೂರಿನ ಸೆಂಟ್ ಆಗ್ನೇಸ್ ಕಾಲೇಜು ಬಳಿ ನಡೆದಿದೆ.







ಕಲ್ಲು ಹೊಡೆದ ಯುವಕನನ್ನು ಸುಳ್ಯ ನಿವಾಸಿ ವಿವೇಕ್ (18) ಎಂದು ಗುರುತಿಸಲಾಗಿದೆ. ಈತ ಸೆಂಟ್ ಆಗ್ನೇಸ್ ಕಾಲೇಜ್ ಬಳಿ ಇರುವ ಪಿಜಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ. ಆಕೆಗೆ ಔಟಿಂಗ್ ಗೆ ಬರಲು ಹೇಳಿದ್ದ. ಆದರೆ ಯುವತಿ ಔಟಿಂಗ್ ಬರಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಪ್ರಿಯಕರ ವಿವೇಕ್, ಆಕೆ ಕೆಲಸ ಮಾಡುತ್ತಿದ್ದ ಪಿಜಿಗೆ ಕಲ್ಲು ಎಸೆದಿದ್ದಾನೆ. ಘಟನೆಯಲ್ಲಿ ಕಟ್ಟಡದ ಗಾಜು ಪುಡಿಯಾಗಿದ್ದು, ಸಾರ್ವಜನಿಕರು ವಿವೇಕ್ನನ್ನು ಹಿಡಿದು ಗೂಸ ನೀಡಿದ್ದಾರೆ.















