ನಮ್ಮ ದೇಶದಲ್ಲಿ ಹೆದ್ದಾರಿ ಅಪಘಾತಕ್ಕೆ ಒಳಗಾಗಿ ಸಾವನ್ನಪ್ಪುವವರ ಸಂಖ್ಯೆ ನಿಮಗೆ ಗೊತ್ತೇ ?-ಸಂಜೆ 6 ರಿಂದ ರಾತ್ರಿ 9 ರ ನಡುವಿನ ಸಮಯದಲ್ಲಿ ದೇಶಾಧ್ಯಂತ 94,009 ರಸ್ತೆ ಅಪಘಾತ – 1,68,491 ಮಂದಿ ಸಾವು-ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ವರದಿ 

ಮಂಗಳೂರು: 2022ರಲ್ಲಿ ಸಂಜೆ 6ರಿಂದ ರಾತ್ರಿ 9 ಗಂಟೆಯ ನಡುವಿನ ಸಮಯದಲ್ಲಿ ದೇಶಾದ್ಯಂತ 94,009 ರಸ್ತೆ ಅಪಘಾತಗಳು ಸಂಭವಿಸಿದೆ. ಇದು ಒಟ್ಟು ಅಪಘಾತ ಪ್ರಕರಣದ ಶೇ 20ರಷ್ಟು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ವರದಿ ಹೇಳಿದೆ. ಮಧ್ಯರಾತ್ರಿ 12 ಗಂಟೆಯಿಂದ ಬೆಳಿಗ್ಗೆ 6 ಗಂಟೆಗೆ ಅತೀ ಕಡಿಮೆ ರಸ್ತೆ ಅಪಘಾತ ಪ್ರಕರಣಗಳು ಸಂಭವಿಸಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

2022ರಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸೇರಿ ಒಟ್ಟು 4,61,312 ರಸ್ತೆ ಅಪಘಾತಗಳು ಸಂಭವಿಸಿವೆ. ಇದರಲ್ಲಿ 1,68,491 ಮಂದಿ ಮೃತಪಟ್ಟಿದ್ದಾರೆ ಹಾಗೂ 4,43,366 ಮಂದಿ ಗಾಯಾಳುಗಳಾಗಿದ್ದಾರೆ. 79,639 ಅಪಘಾತ ಪ್ರಕರಣಗಳು ಸಂಜೆ 3 ರಿಂದ 6 ಗಂಟೆ ನಡುವೆ ನಡೆದಿದೆ. ಇದರ ಪ್ರಮಾಣ ಶೇ 17.3 ರಷ್ಟು. ಅಪಘಾತದ ತೀವ್ರತೆಯಲ್ಲಿ ಮಿಜೋರಾಂ (ಶೇ 85) ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಬಿಹಾರ (82.4) ಮತ್ತು ಪಂಜಾಬ್ ಮೂರನೇ ಸ್ಥಾನದಲ್ಲಿದೆ (77.5). ನೂರು ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುವ ಸಂಖ್ಯೆಯ ಮೂಲಕ ಅಪಘಾತದ ತೀವ್ರತೆಯನ್ನು ಅಳೆಯಲಾಗುತ್ತದೆ. 2021ಕ್ಕೆ ಹೋಲಿಕೆ ಮಾಡಿದರೆ, 2022ರಲ್ಲಿ ಇದರ ಸರಾಸರಿ ಶೇ 36.5ಕ್ಕೆ ಕುಸಿದಿದೆ.

ರಸ್ತೆ ಅಪಘಾತದಿಂದ ಸಂಭವಿಸುವ ಸಾವಿನ ಪ್ರಮಾಣದಲ್ಲಿ ಸಿಕ್ಕಿಂ (ಶೇ 17) ಮೊದಲ ಸ್ಥಾನದಲ್ಲಿದ್ದು, ಬಿಹಾರ (9) ಎರಡನೇ ಸ್ಥಾನದಲ್ಲಿದೆ. ಇದರ ಒಟ್ಟು ರಾಷ್ಟ್ರೀಯ ಸರಾಸರಿ ಶೇ 5.2ರಷ್ಟಿದ್ದು, ಅರ್ಧಕ್ಕಿಂತ ಹೆಚ್ಚು ರಾಜ್ಯಗಳ ಸರಾಸರಿ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದೆ. ಒಟ್ಟು ಅಪಘಾತಕ್ಕೀಡಾದ ವಾಹನಗಳಲ್ಲಿ ಸಿಂಹಪಾಲು ದ್ವಿಚಕ್ರ ವಾಹನಗಳದ್ದೇ (ಶೇ 44.5) ಇದ್ದು, ಇದರಲ್ಲಿ 74,897 ಮಂದಿ ಮೃತಪಟ್ಟಿದ್ದಾರೆ. ಅನಂತರ ಸ್ಥಾನದಲ್ಲಿ ಪಾದಾಚಾರಿಗಳು (ಶೇ 19.5) ರಷ್ಟು ಇದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

LEAVE A REPLY

Please enter your comment!
Please enter your name here