ಬೈಕ್‌ ಕಳವು ಮಾಡುತ್ತಿದ್ದ ಫಹಾದ್‌ ಬಂಧನ-2 ಬೈಕ್‌ ವಶಕ್ಕೆ

ಮಂಗಳೂರು: ಮಂಗಳೂರು ಉತ್ತರ ಠಾಣೆಯ ಪೊಲೀಸರು ಮೋಟರ್‌ ಬೈಕ್‌ ಕಳ್ಳತನ ಮಾಡುತ್ತಿದ್ದ ಅಬ್ದುಲ್‌ ಖಾದರ್‌ ಫಹಾದ್‌(25) ಎಂಬಾತನನ್ನು ಮಂಗಳೂರು ನಗರದ ಕಂಡತಪಳ್ಳಿ ಬಳಿ ಬಂಧಿಸಿ ಕಳವು ಮಾಡಲಾದ 2 ಬೈಕ್‌ ಗಳನ್ನು ವಶಪಡಿಸಿಕೊಂಡಿದ್ದಾರೆ.

ಸುರತ್ಕಲ್‌ ನ ಕೃಷ್ಣಾಪುರ ನಿವಾಸಿಯಾಗಿರುವ ಫಹಾದ್ ಆ.31 ರಂದು ಕೆಎಂಸಿ ಆಸ್ಪತ್ರೆಯ ಪಾರ್ಕಿಂಗ್‌ ಸ್ಥಳದಿಂದ ಹೀರೋ ಹೋಂಡಾ ಬೈಕ್‌, ಅ.20ರಂದು ಕೋಣಾಜೆ ಬಳಿಯ ಬಳಿಯೂರಿನಲ್ಲಿ ಫ್ಯಾಶನ್‌ ಪ್ರೋ ಬೈಕನ್ನು ಕಳವು ಮಾಡಿದ್ದ. ಮಹೇಶ್‌ ಎಂಬವರು ಮಂಗಳೂರು ಉತ್ತರ ಠಾಣೆಗೆ ಕೆಎಂಸಿ ಆಸ್ಪತ್ರೆಯ ಪಾರ್ಕಿಂಗ್‌ ಸ್ಥಳದಿಂದ ಬೈಕ್‌ ಕಳವಾದ ಬಗ್ಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸ್‌ ಆಯುಕ್ತರಾದ ಅನುಪಮ್‌ ಅಗರ್ವಾಲ್ ಮಾರ್ಗದರ್ಶನದಲ್ಲಿ ಉಪ ಪೊಲೀಸ್‌ ಆಯುಕ್ತರಾದ ಸಿದ್ದಾರ್ಥ ಗೋಯಲ್‌, ದಿನೇಶ್‌ ಕುಮಾರ್‌ ಸಹಾಯಕ ಪೊಲೀಸ್‌ ಆಯುಕ್ತ ಮಹೇಶ್‌ ಕುಮಾರ್‌ ಅವರ ನಿರ್ದೇಶನದಲ್ಲಿ ಮಂಗಳೂರು ಉತ್ತರ ಪೊಲೀಸ್‌ ಠಾಣೆಯ ನಿರೀಕ್ಷಕರಾದ ಅಜ್ಮತ್‌ ಅಲಿ, ನೇತೃತ್ವದಲ್ಲಿ ಪೊಲೀಸ್‌ ಉಪ ನಿರೀಕ್ಷಕರಾದ ವನಜಾಕ್ಷಿ ಮತ್ತು ಎಎಸ್‌ಐ ದಾಮೋದರ್‌, ಹೆಚ್‌ಸಿ ಗಳಾದ ಮಧನ್‌, ವಿನೋದ್‌, ಯಶವಂತ ರೈ, ಸಿಬ್ಬಂದಿಗಳಾದ ಆನಂದ್‌ ಸಂಪತ್, ಸುನೀಲ್, ಗುರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 70 ಸಾವಿರ ಎಂದು ಅಂದಾಜಿಸಲಾಗಿದೆ.

LEAVE A REPLY

Please enter your comment!
Please enter your name here