ಮಂಗಳೂರು(ಛತ್ತೀಸ್‌ಗಢ): ಛತ್ತೀಸ್‌ಗಢದಲ್ಲಿ ಮಂಗಳವಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಗಿದ 24 ಗಂಟೆಯ ಬಳಿಕ ನಕ್ಸಲ್‌ಪೀಡಿತ ಬಿಜಾಪುರ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ 200ಕ್ಕೂ ಹೆಚ್ಚು ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಚುನಾವಣಾ ನಿಯಂತ್ರಣ ಕೊಠಡಿಗೆ ಯಾವುದೇ ಮಾಹಿತಿ ದೊರೆತಿಲ್ಲ.
ಛತ್ತೀಸ್‌ಗಢದಲ್ಲಿ ಮಂಗಳವಾರ ನಡೆದ ಮೊದಲ ಹಂತದಲ್ಲಿ ಶೇ.71.48ರಷ್ಟು ಮತದಾನವಾಗಿದೆ. ನಕ್ಸಲೀಯರು ಹಿಂಸಾಚಾರ ಹಾಗೂ ಮತದಾನ ಬಹಿಷ್ಕರಿಸಲು ಕರೆ ನೀಡಿದ್ದರು. ಈ ಬೆದರಿಕೆಯನ್ನು ಗ್ರಹಿಸಿದ ಅಧಿಕಾರಿಗಳು ಪ್ರತ್ಯೇಕ ಸಮಯದ ಸ್ಲಾಟ್‌ಗಳಲ್ಲಿ ಮತದಾನಕ್ಕೆ ಅವಕಾಶ ನೀಡಿದ್ದರು. ಬಿಜಾಪುರದಲ್ಲಿ ಅತಿ ಕಡಿಮೆ ಶೇ 40.98 ರಷ್ಟು ಮತದಾನ ದಾಖಲಾಗಿತ್ತು. ಮತಗಟ್ಟೆಯ 200ಕ್ಕೂ ಹೆಚ್ಚು ಸಿಬ್ಬಂದಿಗಳು ಈವರೆಗೂ ಚುನಾವಣಾ ನಿಯಂತ್ರಣ ಕೊಠಡಿಗೆ ಮತದಾನದ ಮಾಹಿತಿ ಸಲ್ಲಿಸಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ. ಭದ್ರತಾ ಕಾರಣಗಳಿಗಾಗಿ ಅವರಲ್ಲಿ ಹಲವರನ್ನು ಹೆಲಿಕಾಪ್ಟರ್ ಮೂಲಕ ಮತಗಟ್ಟೆಗಳ ಸಮೀಪ ಇಳಿಸಲಾಗಿತ್ತು.
ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಆಂಜನೇಯ ವೈಷ್ಣವ್, ನಕ್ಸಲರು ಮತಗಟ್ಟೆ ಸಿಬ್ಬಂದಿಯನ್ನು ಅಪಹರಿಸಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಸುಮಾರು 76 ಸ್ಥಳಗಳಲ್ಲಿ ಹೆಲಿಕಾಪ್ಟರ್‌ಗಳ ಮೂಲಕ ಸಿಬ್ಬಂದಿಯನ್ನು ಮತಗಟ್ಟೆಗೆ ಕಳುಹಿಸಿದ್ದೇವೆ. ಅವರ ಭದ್ರತೆಯ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದ್ದಾರೆ.