ವಿ.ಕೆ ಫರ್ನಿಚರ್ಸ್ ಆಂಡ್ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಗೊದ್ರೇಜ್ 4 ಡೋರ್ ರೆಫ್ರಿಜರೇಟರ್ ಬಿಡುಗಡೆ

ಮಂಗಳೂರು: ಮಂಗಳೂರು ಹೊರವಲಯದ ತೊಕ್ಕೊಟ್ಟು ಕಲ್ಲಾಪುವಿನ ಹೆಸರಾಂತ ಇಲೆಕ್ಟ್ರಾನಿಕ್ಸ್‌ ಮತ್ತು ಫರ್ನಿಚರ್ ಮಳಿಗೆಯಲ್ಲಿ ಗೊದ್ರೇಜ್ ಸಂಸ್ಥೆಯ ನೂತನ ತಂತ್ರಜ್ಞಾನವುಳ್ಳ 4 ಡೋರ್ ರೆಫ್ರಿಜರೇಟರನ್ನು ಹುಬ್ಬಳ್ಳಿ ಭಾಗದ ಗೊದ್ರೇಜ್ ಬ್ರಾಂಚ್ ಹೆಡ್ ನಿತೀಶ್ ನಾಡರ್ ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಅವರು, 10 ವರ್ಷಗಳಿಂದ ವಿ.ಕೆ ಗ್ರೂಪ್ ಜತೆಗೆ ಉತ್ತಮ ವ್ಯವಹಾರ ಮಾಡಿದ್ದೇವೆ. ಇದು ಸಂಸ್ಥೆಯ ಎಲ್ಲಾ ಪ್ರತಿನಿಧಿಗಳು ಹಾಗೂ ವಿ.ಕೆ ಗ್ರೂಪ್ ಆಡಳಿತದ ಪ್ರಯತ್ನದಿಂದ ಸಾಧ್ಯವಾಗಿದೆ. ನಾವೀನ್ಯತೆಗಳನ್ನು ಒಳಗೊಂಡು ಜನರಿಗೆ ಅನುಕೂಲಕರವಾಗಿರುವ ಗೃಹಬಳಕೆ ಸಾಮಾಗ್ರಿಗಳನ್ನು ಮಾರುಕಟ್ಟೆಗೆ ಗೊದ್ರೇಜ್ ಸಂಸ್ಥೆ ಪರಿಚಯ ಮಾಡುತ್ತಲೇ ಬಂದಿದ್ದು, ಇದೀಗ ವಿನೂತನವಾಗಿ 4 ಡೋರಿನ ರೆಫ್ರಿಜರೇಟರನ್ನು ಪ್ರಸ್ತುತಪಡಿಸುವ ಮೂಲಕ ವಿ.ಕೆ ಸಂಸ್ಥೆಯಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ ಎಂದರು.

ವಿ.ಕೆ ಗ್ರೂಪ್ ಎಂ.ಡಿ ವಿಠಲ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದ ಬಿಡುಗಡೆ ಕಾರ್ಯಕ್ರಮದಲ್ಲಿ ಟ್ರೇಡ್ ಮಾರ್ಕೆಟಿಂಗ್ ಮೆನೇಜರ್ ಹುಬ್ಬಳ್ಳಿ ಆದಿತ್ಯ ದಾಂಢಿನ ,ರಿಟೇಲರ್ ಕೋಚ್ ದನಂಜಯ್ ಕೆ., ಜನರಲ್ ಮೆನೇಜರ್ ಸತೀಶ್ ಪೂಜಾರಿ, ವಿ.ಕೆ ಗ್ರೂಪ್ ಪರ್ಚೇಸ್ ಮೆನೇಜರ್ ಭವ್ಯ ಕದ್ರಿ, ವಿ.ಕೆ ಗ್ರೂಪ್ ಅಕೌಂಟ್ ಮೆನೇಜರ್ ಸಂದೀಪ್ ಮಣೈ, ಬ್ರಾಂಚ್ ಮೆನೇಜರ್ ಹರೀಶ್ ಬಂಗೇರ ಉಪಸ್ಥಿತರಿದ್ದರು. ಕಸ್ಟಮರ್ ಎಡ್ವೈಸರ್ ಅಕ್ಷಿತಾ ಎಂ. ನೂತನವಾಗಿ ಬಿಡುಗಡೆಗೊಳಿಸಿದ ಗೊದ್ರೇಜ್ ರೆಫ್ರಿಜರೇಟರ್ ಕುರಿತ ತಾಂತ್ರಿಕ ಹಾಗೂ ನಾವೀನ್ಯತೆಗಳ ಬಗ್ಗೆ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here