ಜುಬೈಲ್‌ ನ ಅಲ್‌ ಮುಝೈನ್‌ ಸಂಸ್ಥೆಯನ್ನು ಅಭಿನಂದಿಸಿ ಪ್ರಶಸ್ತಿ ನೀಡಿದ ಸೌದಿ ರಾಜಕುಮಾರ

ಮಂಗಳೂರು(ಜುಬೈಲ್): ಸೌದಿ‌ ಅರೇಬಿಯಾದ ಜುಬೈಲ್‌ ನಲ್ಲಿರುವ‌ ಕಾಂಟ್ರಾಕ್ಟ್‌ ಕಂಪನಿ ಅಲ್‌ ಮುಝೈನ್‌ ಸಂಸ್ಥೆಯ ಕೊಡುಗೆಗಾಗಿ ಪೂರ್ವಪ್ರಾಂತದ ಗವರ್ನರ್ ಆಗಿರುವ ಸೌದಿ ರಾಜಕುಮಾರ‌ ಸೌದ್‌ ಬಿನ್ ನಯೇಫ್‌ ಬಿನ್‌ ಅಬ್ದುಲ್‌ ಅಝೀಝ್ ಸಂಸ್ಥೆಯನ್ನು ಅಭಿನಂದಿಸಿ ಗೌರವ ಪ್ರಶಸ್ತಿ ನೀಡಿದ್ದಾರೆ.

ಪೂರ್ವಪ್ರಾಂತದ ಅಭಿವೃದ್ಧಿಗೆ ನೀಡಿದ ಬೆಂಬಲಕ್ಕಾಗಿ ಕಂಪೆನಿಯನ್ನು ಅಭಿನಂದಿಸಿದ ಸೌದಿ ರಾಜಕುಮಾರ ಅವರಿಂದ ಅಲ್‌ ಮುಝೈನ್‌ ಸಂಸ್ಥೆಯ ನಿರ್ದೇಶಕ ಝಹೀರ್‌ ಝಕಾರಿಯಾ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸೌದಿ ಉದ್ಯಮ ವಲಯಕ್ಕೆ ಅಲ್‌ ಮುಝೈನ್‌ ಸಂಸ್ಥೆ ನೀಡಿದ ಕೊಡುಗೆಯನ್ನು ಸೌದಿ ರಾಜಕುಮಾರ ಸ್ಮರಿಸಿದರು. ಅಲ್‌ ಮುಝೈನ್‌ ಸಂಸ್ಥೆ ಇಲ್ಲಿ ಉದ್ಯೋಗ ಮಾಡುತ್ತಿರುವ ಕರಾವಳಿಯ ಎಲ್ಲಾ ಧರ್ಮೀಯರ ಸಾವಿರಾರು ಕುಟುಂಬದ ಬದುಕಿಗೆ ನೆರಳಾಗಿದೆ.

 

LEAVE A REPLY

Please enter your comment!
Please enter your name here