ಪ್ರಸಿದ್ಧ ಪ್ರವಾಸಿ ತಾಣ ದಾಲ್ ಸರೋವರದಲ್ಲಿ ಭಾರಿ ಅಗ್ನಿ ಅವಘಡ-ಕೋಟ್ಯಂತರ ಮೌಲ್ಯದ ಆಸ್ತಿ ನಷ್ಟ

ಮಂಗಳೂರು(ಶ್ರೀನಗರ): ಪ್ರಸಿದ್ಧ ಪ್ರವಾಸಿ ತಾಣವಾದ ದಾಲ್ ಸರೋವರದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ ಘಟನೆ ನ.11ರ ಮುಂಜಾನೆ ನಡೆದಿದೆ. ಘಟನೆಯಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ನಾಶವಾಗಿದೆ.

ಅಗ್ನಿ ಅವಘಡ ಸಂಭವಿಸಿದ ಪರಿಣಾಮ ದಾಲ್ ಸರೋವರದ ಹತ್ತಿರವಿದ್ದ ಸುಮಾರು 5 ಹೌಸ್‌ ಬೋಟ್‌ಗಳ ಜೊತೆಗೆ 3 ಗುಡಿಸಲುಗಳು ಸುಟ್ಟು ಬೆಂಕಿಗೆ ಆಹುತಿಯಾಗಿದೆ. ಇನ್ನು ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುವ ಈ ದಾಲ್ ಸರೋವರವು ಶ್ರೀನಗರದ ಪ್ರವಾಸಿ ತಾಣದಲ್ಲೇ ಅತೀ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ಸಂಭವಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here