ಬಹುಮಹಡಿ ಕಟ್ಟಡದಲ್ಲಿ ಬೆಂಕಿ-7 ಮಂದಿ ಸಜೀವದಹನ-ಮೂವರ ಸ್ಥಿತಿ ಗಂಭೀರ-16 ಜನರ ರಕ್ಷಣೆ

ಮಂಗಳೂರು(ತೆಲಂಗಾಣ): ನಗರದ ನಾಂಪಳ್ಳಿಯ ಬಜಾರ್‌ಘಾಟ್‌ನಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ನ.13ರ ಬೆಳಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 7 ಮಂದಿ ದಹನವಾಗಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, 16 ಜನರನ್ನು ರಕ್ಷಿಸಲಾಗಿದೆ.

ದುರಂತ ಸಂಭವಿಸಿರುವ ನಾಲ್ಕು ಅಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿ ರಾಸಾಯನಿಕ ಗೋದಾಮು ಇದ್ದು, ಕಟ್ಟಡದ ನೆಲಮಹಡಿಯಲ್ಲಿ ಕಾರ್‌ ರಿಪೇರಿ ಮಾಡಲಾಗುತ್ತಿತ್ತು. ಈ ವೇಳೆ ಅಲ್ಲೇ ಇದ್ದ ರಾಸಾಯನಿಕ ತುಂಬಿದ್ದ ಡ್ರಮ್‌ಗಳಿಗೆ ಬೆಂಕಿ ತಗುಲಿ ಬೆಳಗ್ಗೆ 9.30ರ ಸುಮಾರಿಗೆ ಅವಘಡ ಸಂಭವಿಸಿದೆ. ಕೆಲ ಹೊತ್ತಿನಲ್ಲೇ ಉಳಿದ ಮಹಡಿಗಳಿಗೂ ಬೆಂಕಿ ವ್ಯಾಪಿಸಿದೆ ಎಂದು ಹೈದರಾಬಾದ್‌ನ ಕೇಂದ್ರ ವಲಯದ ಡಿಸಿಪಿ ವೆಂಕಟೇಶ್ವರ್‌ ರಾವ್‌ ತಿಳಿಸಿದ್ದಾರೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here