ಕಬ್ಬಿಣ, ಮರದ ದಿಮ್ಮಿ ಇಟ್ಟು ರೈಲ್ವೇ ಹಳಿ ತಪ್ಪಿಸಲು ಸ್ಕೆಚ್ – ಒಡಿಶಾ ಮೂಲದ ಮೂವರ ಬಂಧನ

ಮಂಗಳೂರು(ಮೈಸೂರು): ಮೈಸೂರಿನಲ್ಲಿ ಭಾರಿ ರೈಲು ದುರಂತವೊಂದು ತಪ್ಪಿದ್ದು ರೈಲ್ವೇ ಹಳಿ ಮೇಲೆ ಕಬ್ಬಿಣದ ರಾಡ್ ಹಾಗೂ ಮರದ ದಿಮ್ಮಿ ಇಟ್ಟು ಹಳಿ ತಪ್ಪಿಸಲು ಸ್ಕೆಚ್ ಹಾಕಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನ.12ರಂದು ಚಾಮರಾಜನಗರದಿಂದ ಮೈಸೂರಿಗೆ ರೈಲು ಸಂಚರಿಸುತ್ತಿದ್ದು ನಂಜನಗೂಡು ಮತ್ತು ಕಡಕೊಳದ ನಡುವೆ ರೈಲ್ವೆ ಹಳಿಯ ಮೇಲೆ ದುಷ್ಕರ್ಮಿಗಳು ಕಬ್ಬಿಣದ ರಾಡ್ ಹಾಗೂ ಮರದ ದಿಮ್ಮಿ ಇಟ್ಟಿದ್ದರು. ಲೋಕೊ ಪೈಲಟ್ ನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಈ ಘಟನೆಗೆ ಸಂಬಂಧಪಟ್ಟಂತೆ ಸೋಮಯ್ ಮರಾಂಡಿ, ಭಜನು ಮುರ್ಮು ಹಾಗೂ ದಸಮತ್ ಮರಾಂಡಿ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಮೂವರು ಆರೋಪಿಗಳು ಓಡಿಶಾ ಮೂಲದವರು ಎಂದು ತಿಳಿದು ಬಂದಿದ್ದು, ವಿಚಾರಣೆ ವೇಳೆ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಮೂವರ ವಿರುದ್ದ ಪ್ರಕರಣ ದಾಖಲಾಗಿದೆ.

 

LEAVE A REPLY

Please enter your comment!
Please enter your name here