ಕೇರಳದ ವಕೀಲ ಬಾಲಸುಬ್ರಹ್ಮಣ್ಯಂ ಮೆನನ್ ಅವರಿಂದ 98ನೇ ವಯಸ್ಸಿನಲ್ಲಿ ಗಿನ್ನೆಸ್ ದಾಖಲೆ

ಮಂಗಳೂರು(ಪಾಲಕ್ಕಾಡ್): ಕೇರಳದ ಉತ್ತರ ಪಾಲಕ್ಕಾಡ್ ಜಿಲ್ಲೆಯ ಖ್ಯಾತ ವಕೀಲ ಪಿ.ಬಾಲಸುಬ್ರಮಣ್ಯಂ ಮೆನನ್ ಸುದೀರ್ಘ ಕಾಲ ವಕೀಲ ವೃತ್ತಿ ನಡೆಸಿ ದಾಖಲೆ ನಿರ್ಮಿಸಿದ್ದಾರೆ.

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, 98 ವರ್ಷದ ಮೆನನ್ 73 ವರ್ಷ 60 ದಿನಗಳಿಂದ ವಕೀಲ ವೃತ್ತಿಯಲ್ಲಿ ಸಕ್ರಿಯರಾಗಿದ್ದರು. ಇದನ್ನು 2023ರ ಸೆಪ್ಟೆಂಬರ್ 11ರಂದು ದಾಖಲೆ ಪುಸ್ತಕಗಳಲ್ಲಿ ದಾಖಲಿಸಲಾಗಿದೆ. ಮೆನನ್ ಅವರ ಮೊಮ್ಮಗಳು ಸುಮಾ ಕನಕಲ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ನನ್ನ ಅಜ್ಜ ನನಗೆ ಸ್ಫೂರ್ತಿ ಎಂದು ಬರೆದುಕೊಂಡಿದ್ದಾರೆ. ಇಳಿವಯಸ್ಸಿನಲ್ಲೂ ಉತ್ಸಾಹಿ ವಕೀಲರಂತೆ ಮೆನನ್ ಕಾಣುತ್ತಾರೆ. ಇಂದಿಗೂ ದಿನವೂ ಕಚೇರಿ, ನ್ಯಾಯಾಲಯಕ್ಕೆ ತೆರಳಿ ಕಕ್ಷಿದಾರರನ್ನು ಭೇಟಿಯಾಗುತ್ತಿದ್ದಾರೆ. ಮೆನನ್ ಈ ಎಲ್ಲಾ ಕೆಲಸಗಳನ್ನು ಯಾವುದೇ ತೊಂದರೆಯಿಲ್ಲದೆ ಮಾಡುತ್ತಾರೆ.

 

LEAVE A REPLY

Please enter your comment!
Please enter your name here