ಕೆಲವೇ ದಿನಗಳಲ್ಲಿ 30 ರಿಂದ 40 ಶಾಸಕರು ಕಾಂಗ್ರೆಸ್​ ತೊರೆಯಲಿದ್ದಾರೆ-ಮಂಗಳೂರಿನಲ್ಲಿ ಭವಿಷ್ಯ ನುಡಿದ ನಳಿನ್ ಕುಮಾರ್ ಕಟೀಲ್​​-ನ.22ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮಂಗಳೂರಿಗೆ-ಕಾರ್ಯಕರ್ತರ ಸಭೆಯಲ್ಲಿ ಭಾಗಿ

ಮಂಗಳೂರು: ಕೆಲವೇ ದಿನಗಳಲ್ಲಿ ಕಾಂಗ್ರೆಸ್​ನಿಂದ 30 ರಿಂದ 40 ಶಾಸಕರು ಪಕ್ಷ ತೊರೆದು ಹೊರಗೆ ಬರಲಿದ್ದಾರೆ. ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ನ ಒಳಗೆ ಆಂತರಿಕ ಜಗಳ ಜಾಸ್ತಿಯಾಗಿದೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್​ ಮತ್ತು ಸತೀಶ್​ ಜಾರಕಿಹೊಳಿ ತಂಡ ಇಬ್ಬಾಗವಾಗುತ್ತಿದೆ. ಅದರ ಮಧ್ಯೆ ಮರಿ ಖರ್ಗೆ ಮುಖ್ಯಮಂತ್ರಿ ಬೇಡಿಕೆ ಇಡುತ್ತಿದ್ದಾರೆ. ಕಾಂಗ್ರೆಸ್ ಡಿವೈಡ್ ಆಗುತ್ತಿದ್ದು ಹಸ್ತದ ಒಳಗೆ ಹಸ್ತದ ಆಪರೇಷನ್ ಆಗುತ್ತಿದೆ. ಕೆಲವೇ ದಿನಗಳಲ್ಲಿ 30 ರಿಂದ 40 ಶಾಸಕರು ಕಾಂಗ್ರೆಸ್‌ ತೊರೆಯಲಿದ್ದಾರೆ. ಈ ಭಯದಿಂದ ಕಾಂಗ್ರೆಸ್ ನವರು ಬಿಜೆಪಿಯಿಂದ ಬರ್ತಾರೆ ಅಂತ ದಾರಿ ತಪ್ಪಿಸುತ್ತಿದ್ದಾರೆ. ಯಾವುದೇ ಕಾರಣಕ್ಕೆ ಬಿಜೆಪಿ ಯಿಂದ ಯಾರೂ ಹೋಗ್ತಾ ಇಲ್ಲ. ಬೆಳಗಾವಿ ಅಧಿವೇಶನದ ಬಳಿಕ ಕಾಂಗ್ರೆಸ್‌ ನಲ್ಲಿ ದೊಡ್ಡ ಪರಿವರ್ತನೆ ಆಗುತ್ತದೆ. ಮುಖ್ಯಮಂತ್ರಿ ಹುದ್ದೆಗೆ ಹತ್ತಾರು ಟವಲ್‌ ಗಳು ಬಿದ್ದಿದೆ. ಜಾರಕಿಹೊಳಿ, ಪರಮೇಶ್ವರ್‌ ಜೊತೆಗೆ ದಲಿತ ಸಿ ಎಂ ಕಾರ್ಡ್‌ ಹೊರಟಿದೆ. ಪ್ರಿಯಾಂಕ ಖರ್ಗೆ, ಡಿಕೆಶಿ ಎಲ್ಲರೂ ಸಿಎಂ ಆಗಲು ಹೊರಟ ಕಾರಣ ಸರಕಾರ ಬೀಳಬಹುದು ಎಂದರು.

ಸರಕಾರ ಟೇಕ್‌ ಆಫ್‌ ಆಗ್ತಾ ಇಲ್ಲ. ಅಭಿವೃದ್ಧಿ ಕಾರ್ಯಗಳೂ ಆಗ್ತಾ ಇಲ್ಲ. ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ, 4 ತಿಂಗಳಲ್ಲಿ 300 ರೈತರ ಆತ್ಮಹತ್ಯೆಯಾಗಿದೆ. ಉಡುಪಿಯಲ್ಲಿ ಹಾಡಹಗಲು ನಾಲ್ವರ ಹತ್ಯೆಯಾಗಿದೆ. ಬರ ನಿಯಂತ್ರಣ ಆಗಿಲ್ಲ. ರಾಜ್ಯದಲ್ಲಿ ಪಾಕಿಸ್ತಾನ ಝಿಂದಾಬಾದ್‌ ಹೇಳಿ ತಲವಾರು ತೋರಿಸಿದರೂ ಬಂಧನ ಆಗುತ್ತಿಲ್ಲ. ರಾಷ್ಟ್ರ ವಿರೋಧಿ ಶಕ್ತಿಗಲು ರಾಜ್ಯದಲ್ಲಿ ತಲೆ ಎತ್ತಿದೆ. ಮೋದಿ ಸರಕಾರ ಕೊಟ್ಟ ಅನುದಾನದಲ್ಲಿ ರಾಜ್ಯದಲ್ಲಿ ಕೆಲಸಗಳು ನಡೆಯುತ್ತಿದೆ. ರಾಜ್ಯದಿಂದ ಬಿಡಿಗಾಸು ಬಿಡುಗಡೆಯಾಗಿಲ್ಲ. ಈ ಸರಕಾರ ಭ್ರಷ್ಟಾಚಾರ ಸರಕಾರ. ಅಧಿಕಾರಿಗಳ ಸಂಬಳ ಕೊಡಲು ಹಣ ಇಲ್ಲ. ಮೂರ್ನಾಲ್ಕು ತಿಂಗಳು ಕಾದು ನೋಡಿ ಎಲ್ಲವೂ ಗೊತ್ತಾಗಲಿದೆ. ನ.22 ಕ್ಕೆ ನೂತನ ರಾಜ್ಯಾಧ್ಯಕ್ಷರು ಮಂಗಳೂರಿಗೆ ಬರಲಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸ್ವಾಗತ ಮಾಡಿ ಅವರನ್ನು ಮೆರವಣಿಗೆಯಲ್ಲಿ ಮಂಗಳೂರಿಗೆ ಕರೆತರಲಾಗುವುದು. ನಗರದ ಸಿ ವಿ ನಾಯಕ್‌ ಹಾಲ್‌ ನಲ್ಲಿ ಕಾರ್ಯಕರ್ತರ ಸಭೆ ನಡೆಯಲಿದೆ ಎಂದು ಕಟೀಲ್ ಹೇಳಿದರು.

 

 

LEAVE A REPLY

Please enter your comment!
Please enter your name here