ಲಾರಿಗೆ ಢಿಕ್ಕಿ ಹೊಡೆದ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೋ – ಆಟೋದಲ್ಲಿದ್ದ 8 ಶಾಲಾ ಮಕ್ಕಳಿಗೆ ಗಂಭೀರ ಗಾಯ-ಸಿಸಿಟಿವಿಯಲ್ಲಿ ಸೆರೆಯಾದ ಅಪಘಾತದ ದೃಶ್ಯ

ಮಂಗಳೂರು(ವಿಶಾಖಪಟ್ಟಣಂ): ವಿಶಾಖಪಟ್ಟಣಂನಲ್ಲಿ ಆಟೋರಿಕ್ಷಾ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಎಂಟು ಶಾಲಾ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ನಗರದ ಸಂಗಮ್‌ ಶರತ್‌ ಥಿಯೇಟರ್‌ ಸಮೀಪ ನಡೆದ ಈ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿದ್ಯಾರ್ಥಿಗಳು ಮುಂಜಾನೆ ಶಾಲೆಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಲಾರಿ ಫ್ಲೈಓವರ್‌ ಕೆಳಭಾಗದಲ್ಲಿನ ರಸ್ತೆಯಲ್ಲಿ ಸಿಗ್ನಲ್‌ ದಾಟುತ್ತಿರುವಾಗ ವೇಗವಾಗಿ ಬಂದ ಆಟೋರಿಕ್ಷಾ ಅದಕ್ಕೆ ಢಿಕ್ಕಿ ಹೊಡೆದಿದೆ. ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಮಕ್ಕಳನ್ನು ಸ್ಥಳೀಯರು ತಕ್ಷಣ ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅವರ ಗಾಯದ ತೀವ್ರತೆಯ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here