ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ತನಿಖೆ ಬಹುತೇಕ ಪೂರ್ಣ – ಪೊಸೆಸಿವ್‌ನೆಸ್ ಹತ್ಯೆಗೆ ಕಾರಣ- ಸುದ್ದಿಗೋಷ್ಠಿಯಲ್ಲಿ ಉಡುಪಿ ಎಸ್‌ಪಿ ಮಾಹಿತಿ

ಮಂಗಳೂರು(ಉಡುಪಿ): ಉಡುಪಿ ಸಮೀಪದ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದೆ. ಆರೋಪಿಯನ್ನು ನ.22ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಡಿ.4ರ ತನಕ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇಂದು ಉಡುಪಿ ಎಸ್ಪಿ ಡಾ.ಅರುಣ್ ತನಿಖೆ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದು‌ ಪ್ರಕರಣದ ಇಂಚಿಂಚು ಮಾಹಿತಿ ನೀಡಿದ್ದಾರೆ.

ಕೊಲೆಯಾದ ಗಗನಸಖಿ ಅಯ್ನಾಝ್ ಮತ್ತು ಆರೋಪಿ ಚೌಗಲೆ ಕಳೆದ ಎಂಟು ತಿಂಗಳಿನಿಂದ ಸ್ನೇಹಿತರಾಗಿದ್ದರು. ಚೌಗಲೆ ಅಲ್ಲೇ ಕ್ಯಾಬಿನ್ ಕ್ರೂ ಆಗಿದ್ದು, ಅಯ್ನಾಝ್‌ಗೆ ಸಹಾಯ ಮಾಡುತ್ತಿದ್ದ. ಆಕೆ ಮಂಗಳೂರಿನ‌ಲ್ಲಿ ಬಾಡಿಗೆ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದಳು. ಆರೋಪಿ ತನ್ನ ಸ್ಕೂಟರ್‌ನ್ನು ಅಯ್ನಾಝ್ ಬಳಕೆಗೆ ನೀಡಿದ್ದ. ಹೀಗೆ ಸಣ್ಣಪುಟ್ಟ ಸಹಾಯ ಮಾಡುತ್ತಿದ್ದ. ಅದ್ರೆ, ಕಳೆದ ಒಂದು ತಿಂಗಳಿನಿಂದ ಅಯ್ನಾಝ್ ಆತನನ್ನು ಅವಾಯ್ಡ್ ಮಾಡುತ್ತಾಳೆ. ಇದೇ ದ್ವೇಷದಿಂದ ಆಕೆಯನ್ನು ಕೊಲೆ ಮಾಡಲು ಸ್ಕೆಚ್ ಹಾಕುತ್ತಾನೆ. ಆ್ಯಪ್ ಮೂಲಕ ಅಯ್ನಾಝ್ ಮನೆಯನ್ನು ಹುಡುಕಿ ನೇರವಾಗಿ ಮನೆಗೆ ಬಂದವ, ಆಕೆಯನ್ನು ಕೊಲ್ಲುವಾಗ ಅಡ್ಡ ಬಂದ ತಾಯಿ ಮತ್ತು ಮೂವರನ್ನು ಕೊಲೆ ಮಾಡಿದ್ದಾನೆ.

ಎಂಟು ತಿಂಗಳಿಂದ ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಆದರೆ, ತಿಂಗಳಿಂದ ಅಯ್ನಾಝ್ ಸರಿಯಾಗಿ ಚೌಗಲೆ ಜೊತೆ ಮಾತನಾಡುತ್ತಿರಲಿಲ್ಲ. ಇದನ್ನು ಆತನಿಗೆ ಸಹಿಸಲಾಗುತ್ತಿರಲಿಲ್ಲ. ಪಾಸೆಸಿವ್‌ನೆಸ್‌ನಿಂದ ಕೊಲೆ ಮಾಡಬೇಕೆಂದು ಪೂರ್ವ ಸಿದ್ಧತೆ ಮಾಡಿಕೊಂಡಿದ್ದ ಪ್ರವೀಣ್, ಅಯ್ನಾಝ್ ಮೇಲೆ ಮೊದಲು ಅಟ್ಯಾಕ್ ಮಾಡುತ್ತಾನೆ. ನಂತರ ಹಸೀನಾ, ಅಫ್ನಾನ್, ಆಸಿಂಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೃತ್ಯದ ಬಳಿಕ ಬೇರೆ ಬೇರೆ ವಾಹನದಲ್ಲಿ ದ.ಕ ಜಿಲ್ಲೆಗೆ ಪರಾರಿಯಾಗಿದ್ದಾನೆ. ಕೈ ಗಾಯಕ್ಕೆ ಚಿಕಿತ್ಸೆ ಪಡೆದು, ಚಾಕು ಮನೆಯಲ್ಲೇ ಇಟ್ಟು ಹೆಂಡತಿ ತವರು ಮನೆಗೆ ಹೋಗಿದ್ದಾನೆ. ನಾವು ಎಲ್ಲಾ ಆಯಾಮದಲ್ಲಿ ತನಿಖೆ ಮಾಡುತ್ತಿದ್ದೇವೆ. ಪ್ರವೀಣ್ ಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. 2007ರಲ್ಲಿ ಪೂನಾ ಪೊಲೀಸ್ ಆಗಿದ್ದವ, ಉತ್ತಮ ಸಂಬಳಕ್ಕಾಗಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸೇರಿದ್ದಾನೆ. ಕೊಲೆ ಸಂದರ್ಭ ಅಮಲು ಪದಾರ್ಥ ಸೇವನೆ ಮಾಡಿದ್ದನೋ ಎಂಬ ಬಗ್ಗೆ ಮೆಡಿಕಲ್ ರಿಪೋರ್ಟ್ ಬರಲಿದೆ ಎಂದು ಎಸ್ಪಿ ಹೇಳಿದ್ದಾರೆ.

 

LEAVE A REPLY

Please enter your comment!
Please enter your name here