350 ರೂಪಾಯಿಗಾಗಿ 60 ಬಾರಿ ಚೂರಿಯಿಂದ ಇರಿದು ಕೊಂದ-ಶವದ ಬಳಿ ನೃತ್ಯ ಮಾಡಿದ ಅಪ್ರಾಪ್ತ 16ರ ಬಾಲಕ

ಮಂಗಳೂರು(ದೆಹಲಿ): 18 ವರ್ಷದ ಯುವಕನನ್ನು ಹಲವು ಬಾರಿ ಚೂರಿಯಿಂದ ತಿವಿದು ಕೊಂದದ್ದಲ್ಲದೇ ಶವದ ಪಕ್ಕದಲ್ಲೇ ನಿಂತು ನೃತ್ಯ ಮಾಡಿದ ವಿಲಕ್ಷಣ ಘಟನೆಯೊಂದು ದೆಹಲಿಯಲ್ಲಿ ನ.21ರಂದು ನಡೆದಿದ್ದು, ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜಫ್ರಾಬಾದ್ ಕಾಲೋನಿಯ ನಿವಾಸಿ 17 ವರ್ಷ ಪ್ರಾಯದ ಯೂಸುಫ್ ಎಂಬಾತನನ್ನು ಈಶಾನ್ಯ ದೆಹಲಿಯ ವೆಲ್ಕಮ್ ಕಾಲೋನಿಯಲ್ಲಿ ಬುಧವಾರ ರಾತ್ರಿ 10.20 ರ ಸುಮಾರಿಗೆ 16 ವರ್ಷದ ಬಾಲಕನೋರ್ವ 350 ರೂಪಾಯಿಗಾಗಿ ಕೊಲೆ ಮಾಡಿದ್ದಾನೆ. ದೆಹಲಿಯ ವೆಲ್‌ಕಮ್‌ ಏರಿಯಾದ ಜಂತಾ ಮಜ್ದೂರ್ ಕಾಲೋನಿಯಲ್ಲಿ ನಡೆದ ಕೊಲೆಯ ಹಿಂದಿನ ಉದ್ದೇಶವು ದರೋಡೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿರಿಯಾನಿ ತಿನ್ನಲು 350 ರೂಪಾಯಿ ನೀಡುವಂತೆ ಆರೋಪಿ ಯೂಸುಫ್‌ನನ್ನು ಕೇಳಿದ್ದಾನೆ. ಹಣ ಕೊಡಲು ನಿರಾಕರಿಸಿದಾಗ ಯೂಸುಫ್ ನನ್ನು ಮೊದಲು ಕತ್ತು ಹಿಸುಕಿದ್ದಾನೆ. ಬಳಿಕ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಯೂಸುಫ್‌ನನ್ನು 60 ಬಾರಿ ಇರಿದಿದ್ದಾನೆ. ದೇಹದ ಬಳಿ ನೃತ್ಯ ಮಾಡುವ ಮೊದಲು ಯೂಸುಫ್‌ನ ಮುಖ, ಕಿವಿ ಮತ್ತು ಕುತ್ತಿಗೆಯನ್ನು ಅನೇಕ ಬಾರಿ ಇರಿದಿದ್ದಾನೆ. ಆರೋಪಿ ಬಾಲಕ ಈ ವೇಳೆ ನಶೆಯಲ್ಲಿದ್ದ ಎಂದು ತಿಳಿದುಬಂದಿದೆ.

“ಆರೋಪಿಯು ಮೊದಲು ಯೂಸುಫ್‌ನನ್ನು ಉಸಿರುಗಟ್ಟಿಸಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಾಗ ಅವನ ಬಳಿಯಿದ್ದ ಸುಮಾರು 350 ರೂ ಹಣವನ್ನು ದೋಚಿ, ಹಲವು ಬಾರಿ ಚೂರಿಯಿಂದ ಇರಿದಿದ್ದಾನೆ. ಗಾಯಗೊಂಡ ಯೂಸುಫ್‌ನನ್ನು ಜಿಟಿಬಿ ಆಸ್ಪತ್ರೆಗೆ ಕರೆದೊಯ್ಯಲಾಗಿ, ಅಲ್ಲಿಯೇ ಮರಣಹೊಂದಿರುವುದು ದೃಢವಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here