ಬೆಂಗಳೂರು ರಾಜ- ಮಹಾರಾಜ ಜೋಡುಕರೆ ಕಂಬಳ – ವಾಹನ ಸಂಚಾರದಲ್ಲಿ ಬದಲಾವಣೆ

ಮಂಗಳೂರು (ಬೆಂಗಳೂರು): ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಅರಮನೆ ಮೈದಾನದಲ್ಲಿ ನ.25, 26ರಂದು ಬೆಂಗಳೂರಿನಲ್ಲಿ ರಾಜ-ಮಹಾರಾಜ ಜೋಡು ಕರೆ ಕಂಬಳ  ಕಾರ್ಯಕ್ರಮ ಆಯೋಜನೆಯಾಗಿದ್ದು, ಈ ಕಾರ್ಯಕ್ರಮಕ್ಕೆ ಹೆಚ್ಚಿನ ಜನ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಅರಮನೆ ಮೈದಾನ ರಸ್ತೆಯಲ್ಲಿ ಸಂಚಾರ ಮಾರ್ಪಾಡು ಮತ್ತು ವಾಹನಗಳ ನಿಲುಗಡೆ ಸ್ಥಳ ಗುರುತಿಸಿ ಸಂಚಾರ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

ನಗರದ ಸಿಬಿಡಿ ಪ್ರದೇಶ, ಬಳ್ಳಾರಿ ರಸ್ತೆ ಹೆಬ್ಟಾಳ, ಯಶವಂತಪುರ ಕಡೆಯಿಂದ ಬರುವ ವಾಹನಗಳು ಮೇಖ್ರಿ ಸರ್ಕಲ್‌ ತಿರುವ ಪಡೆದು ಗೇಟ್‌ ನಂ-01ರ ಕೃಷ್ಣವಿಹಾರ್‌ರಲ್ಲಿ ಪ್ರವೇಶಿಸಿ, ವಾಹನ ಪಾರ್ಕ್‌ ಮಾಡಬೇಕು. ಕ್ಯಾಬ್‌ ಸೇವೆ ಬಳಸಿಕೊಳ್ಳುವವರು ಗೇಟ್‌ ನಂ.2 ಪ್ರವೇಶಿಸಿ ನಿಗದಿತ ಸ್ಥಳದಲ್ಲಿ ಇಳಿದು ಗೇಟ್‌ ನಂ.03 ಮೂಲಕ ಕ್ಯಾಬ್‌ಗಳು ನಿರ್ಗಮಿಸಬೇಕು. ವಾಪಸ್‌ ಹೋಗುವ ವಾಹನಗಳು ಕಡ್ಡಾಯವಾಗಿ ಜಯಮಹಲ್‌ ರಸ್ತೆಯ ಅಮಾನುಲ್ಲಾ ಖಾನ್‌ ಗೇಟ್‌ ಮೂಲಕ ತೆರಳಬೇಕು ಎಂದು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರ್ಯಾಯ ಮಾರ್ಗ: ಉಳಿದಂತೆ ಪ್ರಯಾಣಿಕರಿಗೆ ಅರಮನೆ ರಸ್ತೆ, ಎಂ.ವಿ. ಜಯರಾಮ್‌ ರಸ್ತೆ, ಬಳ್ಳಾರಿ ರಸ್ತೆ, ಕನ್ನಿಂಗ್‌ ಹ್ಯಾಂ ರಸ್ತೆ, ಮಿಲ್ಲರ್‌ ರಸ್ತೆ, ಜಯಮಹಲ್‌ ರಸ್ತೆಗಳನ್ನು ಬಳಸದೆ ಬೇರೆ ಮಾರ್ಗದಲ್ಲಿ ಹೋಗಲು ಕೋರಲಾಗಿದೆ. ಹಾಗೆಯೇ ಪ್ಯಾಲೆಸ್‌ ರಸ್ತೆ, ಎಂ.ವಿ. ಜಯರಾಮ್‌ ರಸ್ತೆ. ಸಿ.ವಿ ರಾಮನ್‌ ರಸ್ತೆ, ವಸಂತನಗರ, ಜಯಮಹಲ್‌ ರಸ್ತೆ, ರಮಣ ಮಹರ್ಷಿ ರಸ್ತೆ, ನಂದಿ ದುರ್ಗ ರಸ್ತೆ, ಬಳ್ಳಾರಿ ರಸ್ತೆ, ತರಳಬಾಳು ರಸ್ತೆ, ಮೌಂಟ್‌ ಕಾರ್ಮೆಲ್‌ ಕಾಲೇಜು ರಸ್ತೆಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.

ಭಾರೀ ಸರಕು ಸಾಗಣೆ ವಾಹನಗಳ ಸಂಚಾರವನ್ನು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಮತ್ತು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ನಿಷೇಧಿಸಲಾಗಿದೆ ಎಂದು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here