ಡಿಕೆಶಿ ಸಿಬಿಐ ಕೇಸ್ ವಾಪಾಸ್ – ಪಾರದರ್ಶಕವಾಗಿದ್ದರೆ ಕೇಸ್ ಹಿಂಪಡೆದಿದ್ದೇಕೆ?-ಪ್ರಾಮಾಣಿಕತೆ  ಪ್ರಶ್ನಾರ್ಥಕ ಚಿಹ್ನೆಯಲ್ಲಿದೆ – ನಳಿನ್ ಕುಮಾರ್‌ ಕಟೀಲ್‌ ವ್ಯಂಗ್ಯ

ಮಂಗಳೂರು: ಸಚಿವ ಸಂಪುಟ ಸಭೆಯಲ್ಲಿ ಡಿಕೆಶಿ ವಿರುದ್ದದ ಸಿಬಿಐ ಕೇಸ್ ವಾಪಾಸ್ ಪಡೆದ ವಿಚಾರದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಕಿಡಿಕಾರಿದ್ದಾರೆ. ಇವರು ಪ್ರಾಮಾಣಿಕರಾಗಿದ್ದರೆ ಪಾರದರ್ಶಕವಾಗಿದ್ದರೆ, ಕೇಸ್ ಹಿಂಪಡೆಯುವ ಅಗತ್ಯವಾದರೂ ಏನಿತ್ತು?. ಇವರಿಗೆ ಭಯ ಯಾಕೆ?, ಇವರ ಪ್ರಾಮಾಣಿಕತೆ ಪ್ರಶ್ನಾರ್ಥಕ ಚಿಹ್ನೆಯಲ್ಲಿದೆ ಎಂದು ಕಟೀಲ್‌ ವ್ಯಂಗ್ಯವಾಡಿದ್ದಾರೆ.

ಸಿಬಿಐ ತನಿಖೆ ಹೊತ್ತಲ್ಲಿ ಸರ್ಕಾರ ಕೇಸ್ ಅನ್ನು ವಾಪಾಸ್ ತೆಗೆಯೋದು ಸರಿಯಲ್ಲ. ಇದು ಸರ್ಕಾರದ ಭ್ರಷ್ಟಾಚಾರವನ್ನು ಸಾರ್ವಜನಿಕವಾಗಿ ತಿಳಿಸುತ್ತದೆ. ಇದನ್ನು ನಾನು ಖಂಡಿಸುತ್ತೇನೆ. ಹಾಗಂತ ಇದೊಂದೇ ಕೇಸ್ ಇಲ್ಲ, ಇಡಿಯಲ್ಲೂ ಸಾಕಷ್ಟು ಕೇಸ್ ಗಳಿವೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

LEAVE A REPLY

Please enter your comment!
Please enter your name here