ಮಂಗಳೂರು: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು ಮತ್ತು ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಜಂಟಿಯಾಗಿ ಕುಡ್ಲ ರನ್ಸ್ ಫಾರ್ ನೋ ಡ್ರಗ್ಸ್ – ಮ್ಯಾರಥಾನ್ ಮತ್ತು ಸೈಕ್ಲೋಥಾನ್ ಡಿ.3ರಂದು ನಡೆಯಲಿದೆ ಎಂದು ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಡಾ. ರಿಯೋ ಡಿಸೋಜ ಹೇಳಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಜೆಇಸಿ ಹಳೆಯ ವಿದ್ಯಾರ್ಥಿ ಸಂಘ, ಎಸ್‌ಜೆಇಸಿ ಫೌಂಡೇಶನ್, ಡಯೋಸಿಸನ್ ಕಮಿಷನ್ ಫಾರ್ ಹೆಲ್ತ್ ಸಹಯೋಗದಲ್ಲಿ ಡಗ್ಸ್ ಸೇವನೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಾದಕ ವ್ಯಸನ ಮುಕ್ತ ಜೀವನ ಶೈಲಿಯನ್ನು ಉತ್ತೇಜಿಸಲು 5 ಕಿ.ಮೀ ಓಟ, 15 ಕಿ.ಮೀ ಓಟದ ಮ್ಯಾರಥಾನ್ ಮತ್ತು ಸೈಕ್ಲೋಥಾನ್ ನಡೆಯಲಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಒಟ್ಟು 3 ಲಕ್ಷಗಳ ಬಹುಮಾನ ನೀಡಲಾಗುತ್ತದೆ. 15 ಕಿ.ಮೀ ಓಟ ವಾಮಂಜೂರಿನ ಸಂತ ಜೋಸೆಫ್ ಕಾಲೇಜಿನಿಂದ ಬೆಳಗ್ಗೆ 6.15ಕ್ಕೆ ಹಾಗೂ 5 ಕಿ.ಮೀ ಓಟ ನಗರದ ಬಿಜೈಯ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಿಂದ ಬೆಳಗ್ಗೆ 6.45ಕ್ಕೆ ಫ್ರಾರಂಭವಾಗಲಿದ್ದು ಕಂಕನಾಡಿಯ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ. ನೋಂದಣಿಗೆ ನ.26ಕ್ಕೆ ಕಡೆಯ ದಿನವಾಗಿದೆ ಎಂದರು.
ಈ ಸಂದರ್ಭ ಸಂತ ಜೋಸೆಫ್ ಕಾಲೇಜಿನ ಎಚ್.ಆರ್. ಮ್ಯಾನೇಜರ್ ರಾಕೇಶ್ ಲೋಬೊ, ಸಂತ ಜೋಸೆಫ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿನೂತನ್ ಕಲಿವೀರ್, ಸಂತ ಜೋಸೆಫ್ ಹಳೆಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ನೆಲ್ಸನ್ ಕ್ಯಾಸ್ತಲಿನೋ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡಾ. ನಾಗೇಶ್ ಕೆ.ಆರ್, ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ಹೆನ್ರಿ ಮಸ್ಕರೇನಸ್ ಉಪಸ್ಥಿತರಿದ್ದರು.