ಕದಳಿ ಬೀಚ್‌ ಟೂರಿಸಂ ಡೆವಲಪ್‌ಮೆಂಟ್ ಸಂಸ್ಥೆಯಿಂದ ಮಂಗಳೂರಿನಲ್ಲಿ ಸ್ಕೂಬಾ ಡೈವಿಂಗ್-ಡಿಸೆಂಬರ್‌ನಲ್ಲಿ ಚಾಲನೆ

ಮಂಗಳೂರು: ಪಣಂಬೂರು ಸಮೀಪದ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್‌ ಆರಂಭವಾಗಲಿದೆ. ನಗರದ ಭಂಡಾರಿ ಬಿಲ್ಡರ್ಸ್‌ನ ಕದಳಿ ಬೀಚ್‌ ಟೂರಿಸಂ ಡೆವಲಪ್‌ಮೆಂಟ್ ಸಂಸ್ಥೆ ಈ ಯೋಜನೆಗೆ ಮುಂದಾಗಿದ್ದು ಡಿ.15ರ ಸಂದರ್ಭದಲ್ಲಿ ಡೈವಿಂಗ್ ಆರಂಭಿಸಲಿದೆ ಎನ್ನಲಾಗಿದೆ.

ಪ್ಯಾರಾಸೈಲಿಂಗ್‌, ಡಿಸ್ಕೊ ರೈಡ್‌, ಬನಾನ ಬೋಟ್‌, ಡಾಲ್ಫಿನ್ ಸಫಾರಿ ಇತ್ಯಾದಿಗಳನ್ನು ನಡೆಸುತ್ತಿರುವ ಕದಳಿ ಸಂಸ್ಥೆ ತೇಲುವ ಜಟ್ಟಿ ಮತ್ತು ಸ್ಕೂಬಾ ಡೈವಿಂಗ್‌ಗೆ ಏಕಕಾಲದಲ್ಲಿ ಯೋಜನೆ ರೂಪಿಸಿದೆ. ಕೆಲವು ವರ್ಷಗಳ ಹಿಂದೆ ಬಾರ್ಜ್‌ ಮುಳುಗಿದ್ದ ಜಾಗವನ್ನು ಸ್ಕೂಬಾ ಡೈವಿಂಗ್‌ಗೆ ನಿಗದಿ ಮಾಡಲಾಗಿದೆ. ಡೈವಿಂಗ್‌ನಲ್ಲಿ ಪಳಗಿದವರು 30ರಿಂದ 40 ಮೀಟರ್ ಆಳದ ವರೆಗೆ ಸಾಗುತ್ತಾರೆ. ನಾವು ಸದ್ಯ 6ರಿಂದ 7 ಮೀಟರ್ ಆಳಕ್ಕೆ ಮಾತ್ರ ಇಳಿಸಲು ಸಾಧ್ಯ’ ಎಂದು ಕದಳಿ ಸಂಸ್ಥೆಯ ಪಾಲುದಾರ ಲಕ್ಷ್ಮೀಶ ಭಂಡಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here