ಮಂಗಳೂರು(ಕೊಲ್ಲಂ): ಕೇರಳದ ಕೊಲ್ಲಂನಿಂದ ಅಪಹರಣಗೊಂಡಿದ್ದ ಆರು ವರ್ಷದ ಬಾಲಕಿ ಅಬಿಗೈಲ್ ಸಾರಾ ರೆಜಿ ಸುರಕ್ಷಿತವಾಗಿ ಪತ್ತೆಯಾಗಿದ್ದಾಳೆ. ಅಪಹರಣಕಾರರು ಕೊಲ್ಲಂ ಆಶ್ರಮದ ಮೈದಾನದಲ್ಲಿ ಮಗುವನ್ನು ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಬಾಲಕಿಯನ್ನು ಪೊಲೀಸರು ಸದ್ಯ ನಗರ ಪೊಲೀಸ್ ಆಯುಕ್ತರ ಕೇಂದ್ರ ಕಚೇರಿಗೆ ಸ್ಥಳಾಂತರಿಸಿದ್ದಾರೆ.
ತನ್ನ ಸಹೋದರನೊಂದಿಗೆ ಟ್ಯೂಷನ್ ತರಗತಿಗೆ ಹೋಗುತ್ತಿದ್ದಆರು ವರ್ಷದ ಬಾಲಕಿಯನ್ನು ಕಾರಿನಲ್ಲಿ ಬಂದ ಮಹಿಳೆ ಸಮೇತವಿದ್ದ ತಂಡವೊಂದು ನ.27ರಂದು ಕೊಲ್ಲಂ ಓಯೂರಿನಿಂದ ಅಪಹರಣ ಮಾಡಿತ್ತು. ಬಳಿಕ ಮಗುವಿನ ತಾಯಿಗೆ ಕರೆ ಮಾಡಿ 10 ಲಕ್ಷ ರೂ. ನೀಡುವಂತೆ ಡಿಮ್ಯಾಂಡ್ ಮಾಡಿತ್ತು. ಕಿಡ್ನಾಪ್ ಗೊಂಡ 20 ಗಂಟೆಗಳ ನಂತರ ಮಗು ಸುರಕ್ಷಿತವಾಗಿ ಪೊಲೀಸರ ಕೈ ಸೇರಿದ್ದು, ಸದ್ಯ ಅಪಹರಣಕಾರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.